ಸಿಎಂ ಕ್ಷಮೆಯಾಚನೆಗೆ ಬಿಜೆಪಿ ನಾಯಕರ ಆಗ್ರಹ

ಬೆಂಗಳೂರು, ಜ. ೧೨- ಬಿಜೆಪಿ ನಾಯಕರು ಆರ್ ಎಸ್ ಎಸ್. ಭಜರಂಗದಳದ ಮುಖಂಡರನ್ನು ಭಯೋತ್ಪಾದಕರಿಗೆ ಹೋಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ನಿಂತು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಆಡಿರುವ ಮಾತುಗಳನ್ನು ವಾಪಸ್ಸು ಪಡೆಯಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಮತ್ತು ಮಾಜಿ ಉಪಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ಆಗ್ರಹಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿರುವ ಮಾತುಗಳನ್ನು ವಾಪಸ್ಸು ಪಡೆಯದೇ ಮೊಂಡಾಟ ಆಡಿದಲ್ಲಿ ನ್ಯಾಯಾಲಯಕ್ಕೆ ಹೋಗುವ ಮೂಲಕ ಅವರ ಮಾನ ಹರಾಜು ಮಾಡುವವರು ಇದ್ದಾರೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ನಗರದ ಯಡಿಯೂರು ಕೆರೆಯಲ್ಲಿ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಅನಂತ್ ಕುಮಾರ್ ಹಾಗೂ ಅಶೋಕ್ ಅವರು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದಿರು.
ಬಿಜೆಪಿ, ಆರ್.ಎಸ್.ಎಸ್. ಭಜರಂಗದಳ ಹಾಗೂ ದೇಶಪ್ರೇಮಿಗಳನ್ನು ಕೆರಳಿಸುವಂತಹ ಮಾತುಗಳನ್ನಾಡಿದ್ದಾರೆ. ಅವರು ಮಾತನಾಡಿರುವುದು ಅಪರಾಧ, ಉದ್ಧಟತನದಿಂದ ಕೂಡಿದ್ದು, ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಧರ್ಮವನ್ನು ಅವಹೇಳನ ಕಾರ್ಯಯಾಗಿ ಕಂಡಿದ್ದು. ಹಿಂದು ವಿರೋಧಿನೀತಿ ಅನುಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ರಾಜ್ಯ ಉಸ್ತುವಾರಿ ನೋಡಿಕೊಳ್ಳುವ ಕೆ.ಸಿ. ವೇಣುಗೋಪಾಲ್ ಅವರ ಹೇಳಿಕೆಯ ಬಗ್ಗೆಯೂ ಆಕ್ರೋಶವ್ಯಕ್ತಪಡಿಸಿದ ಅಶೋಕ್ ಅವರು ಅವರೇನು ನೆಂಟರೇ, ಚಿಕ್ಕಪ್ಪರೇ ಅವರು ಕೋಮುವಾದವನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಭಯೋತ್ಪಾದಕರು ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಾಳೆ ನಗರದಲ್ಲಿ ಜೈಲ್ ಭರೋ ಕಾರ್ಯಕ್ರಮವನ್ನು ನಡೆಸಲಿದ್ದೇವೆ. ನಾವು ಭಯೋತ್ಪಾದಕರು, ಉಗ್ರಗಾಮಿಗಳು, ನಮ್ಮನ್ನು ಜೈಲಿಗೆ ಹಾಕಲಿ ಎಂದು ಒತ್ತಾಯಿಸಿದರು. ಮುಸ್ಲಿಂ ಓಟುಗಳನ್ನು ಪಡೆಯಲು ಅವರನ್ನು ಓಲೈಸುವ ಸಲುವಾಗಿ ಇಂತಹ ಮಾತಗಳನ್ನಾಡಿದ್ದಾರೆ. ಸಿದ್ದರಾಮಯ್ಯರವರು ಆಡಿದ ಮಾತುಗಳನ್ನು ಪಾಕಿಸ್ತಾನ ಹಾಗೂ ಭಯೋತ್ಪಾದಕರನ್ನು ಉತ್ತೇಜಿಸುವಂತಿದೆ ಎಂದರು.

Leave a Comment