ಸಿಎಂ ಆಗಲಿ ಯಾರೇ ಆಗಲಿ, ತನಿಖೆ ಆಗ್ಲೇಬೇಕು-ಸಿದ್ದು

ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಿ ಇಂದೂ ಕೂಡ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿ.ಎಲ್.ಪಿ. ಸಿದ್ಧರಾಮಯ್ಯ, ಆಡಿಯೋ ಪ್ರಕರಣವನ್ನು ಇಲ್ಲಿಗೆ ಬಿಡಲು ಸಾಧ್ಯವಿಲ್ಲ. ತನಿಖೆ ಆಗಲೇ ಬೇಕು. ಕೊಲೆಯಾದ ಬಳಿಕ ತನಿಖೆ ಆಗಲೇಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಈ ಪ್ರಕರಣದ ಬಗ್ಗೆ ವಿಸ್ತೃತವಾಗಿ ಮಾತನಾಡಿದ ಸಿದ್ಧರಾಮಯ್ಯ, ಇಂತಹ ಪ್ರಕರಣದ ತನಿಖೆಗೆ ಪ್ರಾಸಿಕ್ಯೂಷನ್ ನಲ್ಲಿ ಅವಕಾಶವಿಲ್ಲ, ಹಕ್ಕುಚ್ಯುತಿ ಸಮಿತಿಯಲ್ಲಿ ಕೂಡ ಅವಕಾಶ ಇಲ್ಲ. ಎಸ್.ಐ.ಟಿ.ಯಲ್ಲಿ ಪ್ರಾಸಿಕ್ಯೂಷನ್ ಗೆ ಅವಕಾಶ ಇದೆ ಎಂದು ಹೇಳಿದ್ದಾರೆ.

ಅಪರಾಧ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅಪರಾಧವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಎಸ್.ಐ.ಟಿ.ಯಿಂದ ತನಿಖೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ವಿವಿಧ ಸೆಕ್ಷನ್ ಗಳನ್ನು ಪ್ರಸ್ತಾಪಿಸಿದ್ದರಿಂದ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾತು ಮುಂದುವರಿಸಿದ ಸಿದ್ದರಾಮಯ್ಯ, ಯಾವುದೇ ಸಾಕ್ಷಗಳನ್ನು ತಿರುಚುವುದು ಗಂಭೀರ ಅಪರಾಧವಾಗಿದ್ದು ಮುಖ್ಯಮಂತ್ರಿಯಾಗಲಿ, ಯಾರೇ ಆಗಲಿ ತಪ್ಪು ಮಾಡಿದರೆ ತನಿಖೆಯಾಗಲಿ. ತನಿಖೆಯ ಬಳಿಕ ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿದೆ. ತನಿಖೆ ನಡೆಸುವುದು ಒಳ್ಳೆಯದು ಎಂದು ಹೇಳಿದ್ದಾರೆ.

Leave a Comment