ಸಿಎಂಗೆ ನಿಲುವೇ ಇಲ್ಲ- ಈಶ್ವರಪ್ಪ ಟೀಕೆ

ಬಾಗಲಕೋಟ,ನ.9- ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ನಿಲುವ ಇಲ್ಲವೆಂದ ಮೇಲೆ ಅದರಲ್ಲಿ ದ್ವಂದ್ವ ಎಲ್ಲಿಂದ ಬರಬೇಕು? ಹಿಗೇಂದು ಹಿಯಾಳಿಸಿದರು. ಮಾಜಿ ಡಿಸಿಎಂ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ. ತಾಲೂಕಿನ ಕಳಸಕೊಪ್ಪ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದು ವೇಳೆ ನಾನು ಸಿಎಂ ಆದರೆ ಟಿಪ್ಪು ಜಯಂತಿ ಆಚರಿಸಲ್ಲ ಎಂದಿದ್ದ ಮುಖ್ಯಮಂತ್ರಿಎಚ್.ಡಿ ಕುಮಾರಸ್ವಾಮಿ ಈಗ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದ್ದಾರೆ.
ಕಳೆದ ಟಿಪ್ಪು ಜಯಂತಿ ಆಚರಣೆ ವೇಳೆ ಮೃತಪಟ್ಟಿದ್ದ ವ್ಯಕ್ತಿಯ ಮನೆಗೆ ಹೋದಾಗ ಕುಮಾರಸ್ವಾಮಿ ಟಿಪ್ಪು ಜಯಂತಿ ವಿರೋದಿಸಿದ್ದರು. ಆದರೆ ಈಗ ಟಿಪ್ಪು ಜಯಂತಿ ಪರವಾಗಿದ್ದಾರೆ. ಅವರಲ್ಲಿ ನಿಲುವೇ ಇಲ್ಲ ಇನ್ನು ದ್ವಂದ್ವ ಎನ್ನುವದು ದೂರದ ಮಾತು ಎಂದರು.
ಅದೃಷ್ಟವೋ ರುದಾದೃಷ್ಟವೋ ಕುಮಾರ್ ಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಿದ್ದಾರೆಂದು ಅವರು ಲೇವಡಿ ಮಾಡಿದರು.
ನಮ್ಮಲ್ಲಿ ಟಿಪ್ಪು ರಕ್ತ ಹರಿಯುತ್ತಿಲ್ಲ. ಸ್ವಾತಂತ್ರ್ಯ ಯೋಧರ ರಕ್ತ ಹರಿಯುತ್ತಿದೆ. ಟಿಪ್ಪು ಜಯಂತಿ ಮಾಡು ಅಂತ ಯಾರೂ ಹೇಳಿದಿಲ್ಲ. ಟಿಪ್ಪು ಜಯಂತಿಯಿಂದ ಕೊಲೆ ಸುಳಿಗೆಗೆ ಕಾರಣವಾಗುತ್ತಿದೆ ಎಂದು ಹೇಳಿದ ಅವರು ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ  ನಡೆಸುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹದಾಯಿ ವಿಷಯವಾಗಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಇದ್ದಾಗ ನಾನು ಜಲಸನ್ಮೂಲ ಸಚಿವನಾಗಿ ಮಹದಾಯಿ ಯೋಜನೆಗೆ ಚಾಲನೆ ನೀಡಿದೆ. ನ್ಯಾಯಾಧಿಕರಣದ ತಿರ್ಪು ಬಂದು ನೀರು ಬಳಕೆಗೆ ಅವಕಾಶ ಇದ್ದರೂ ಸಹ ರಾಜ್ಯ ಸರ್ಕಾರ ಒಂದು ಹೆಜ್ಜೆಯೂ ಮುಂದೆ ಇಟ್ಟಿಲ್ಲ. ಇದನ್ನು ವಿರೋಧಿಸಿ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು. ಮಾಜಿ ಸಚಿವ ಬಿಳಗಿ ಶಾಸಕ ಮುರಗೇಶ ನಿರಾಣಿ ಉಪಸ್ಥಿತರಿದ್ದರು.

Leave a Comment