ಸಿಆರ್ ಪಿಎಫ್   ಯೋಧರ ಕುಟುಂಬಕ್ಕೆ  25 ಲಕ್ಷ ರೂ, ಪರಿಹಾರ ಘೋಷಿಸಿದ ಯೋಗಿ

ಲಕ್ನೋ , ಜೂ 13- ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಾಜ್ಯದ ಇಬ್ಬರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿರುವುದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ  ಶೋಕ ವ್ಯಕ್ತ ಪಡಿಸಿದ್ದಾರೆ

ರಾಜ್ಯದಿಂದ  ಹುತಾತ್ಮರಾದ  ಯೋಧರ ಕುಟುಂಬಕ್ಕೆ ತಲಾ  25 ಲಕ್ಷ ರೂಪಾಯಿ ಪರಿಹಾರ    ಜೊತೆಗೆ ಅವರ  ಕುಟುಂಬದ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಕೊಡುವ ಭರವಸೆ ನೀಡಿದ್ದಾರೆ.

ಹುತಾತ್ಮರಾದ ಯೋಧರ  ಗ್ರಾಮದ ಪ್ರಮುಖ ಬೀದಿಗಳಿಗೆ  ಅವರ  ಹೆಸರಿಡಲಾಗುವುದು ಮತ್ತು ಯೋಧರ  ಅಂತ್ಯಕ್ರಿಯೆ ತೆರಳುವಂತೆ ಇಬ್ಬರು ಸಚಿವರಿಗೆ ಅವರು ತಾಕೀತು ಮಾಡಿದ್ದಾರೆ.

ಈ ಘಟನೆಯಲ್ಲಿ ಒಟ್ಟು ಐವರು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು.

Leave a Comment