ಸಿಂಹ

ಈ ವರ್ಷ ಯುಗಾದಿಯಿಂದ ಅಕ್ಟೋಬರ್ 10 ರವರೆಗೆ ನಿಮಗೆ 3ನೇ ಗುರು. ನಂತರ 4ನೇ ಗುರು. ಶನಿ 5ನೇಯವನಿರುವನು. ನಿಮ್ಮ ಬದುಕು ಕುಂಟುತ್ತಾ ಸಾಗುವುದು. ಹೇಳಿಕೊಳ್ಳದಂಥ ಸಾಧನೆಗಳು ಆಗದೇ ಉಳಿದುಬಿಡುವವು. ಉದ್ಯೋಗದಲ್ಲಿ ಆಸಕ್ತಿ ಕುಂದುವುದು. ಆರ್ಥಿಕ ಸ್ಥಿತಿ ಅವನತಿಯಲ್ಲಿದ್ದು ಭುಗಿಲೆಬ್ಬಿಸುವುದು. ಮಡದಿ- ಮಕ್ಕಳು ಹಾಗೂ ಕುಟುಂಬದ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಂತು ದುಡಿಯುವರು. ಆದರೂ ಸ್ಥಿರಾಸ್ತಿಯಲ್ಲಿ ಹಾನಿಗೊಳಗಾಗುವ ಸಾಧ್ಯತೆ ಇದೆ. ಹಿತ-ಮಿತವಾಗಿ ಕುಟುಂಬ ಸಲಹುವಲ್ಲಿ ಯಶಸ್ವಿಯಾಗುವಿರಿ. ಸರ್ಕಾರಿ ನೌಕರಿದಾರರು ಬಡ್ತಿ ವಂಚಿತರಾಗುವರು. ಅಧಿಕಾರಿಯೊಂದಿಗಿನ ಸಂಬಂಧ ಹಳಸುವುದು. ಸಾಮಾಜಿಕ ಕ್ಷೇತ್ರದಲ್ಲಿ ಅಪವಾದಗಳಿಗೆ ಒಳಗಾಗುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದುಳಿಯುವರು. ಶೈಕ್ಷಣಿಕ ಖರ್ಚು ವೆಚ್ಚಗಳ ಭಾರ ಅತಿಯಾಗುವುದು. ನಿಭಾಯಿಸಲು ಮೌಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮತ್ತೊಂದೆಡೆ ಸಾಲದ ಬಾಧೆ ಹಿಂಸಿಸುವುದು. ಆದರೂ ಮನೆಯಲ್ಲಿ ಮಂಗಳಕಾಱ್ಯ ನೆರವೇರಿಸಲು ಮುಂದಾಗುವಿರಿ. ಆತ್ಮೀಯರು ಕಾಱ್ಯಕ್ಕೆ ಬೆಂಬಲ ನೀಡುವರು. ಯತಿದರ್ಶನ ಭಾಗ್ಯ. ಉಪದೇಶದಿಂದ ನೆಮ್ಮದಿ. ಶಿಕ್ಷಕರು, ವೈದ್ಯರು, ಸಾಹಿತಿಗಳು, ಕಲಾವಿದರ ಜೀವನ ಅಲ್ಪ ನೆಮ್ಮದಿಯಿಂದ ಮುಂದೆ ಸಾಗುವುದು. ಪಿತ್ರಾರ್ಜಿತ ಆಸ್ತಿ ಇಬ್ಭಾಗವಾಗಲಿದೆ. ಕಾರ್ಮಿಕ ವರ್ಗ ತತ್ತರಿಸುವುದು. ಸಣ್ಣ ಕೈಗಾರಿಕಾಶ್ರಿತರು ಇದ್ದುದರಲ್ಲೆ ತೃಪ್ತಿ ಪಡಬೇಕಾಗುತ್ತದೆ. ಸಾಹಿತಿ, ಕಲಾವಿದ, ಸಂಶೋಧಕ, ವ್ಯಾಪಾರಿ, ಮುದ್ರಕ ಪ್ರಕಾಶಿಕರ ಜೀವನ ಏರಿಳಿತದಲ್ಲೇ ಇರುವುದು. ಮಹಿಳೆಗೆ ನೌಕರಿಯಿಂದ ನೆಮ್ಮದಿ ಇರದೆ ವಿಮುಖವಾಗುವ ಲಕ್ಷಣವಿದೆ.

ಆದಾಯ-11 ವ್ಯಯ-11