ಸಿಂಧನೂರು ಮನೆಗಳುವು : 152 ತೊಲೆ ಚಿನ್ನ ಕಳುವು

ರಾಯಚೂರು.ನ.21- ಸಿಂಧನೂರು ನಗರದ ಧನಗಾರವಾಡಿಯಲ್ಲಿ ಶಾಂತಕುಮಾರ ಎಂಬುವವರ ಮನೆಯಲ್ಲಿ ಕಳುವಿನ ಪ್ರಕರಣ ನಡೆದಿದೆ. ‌
ರಾತ್ರಿ ಮನೆ ಮಹಡಿ ಮೇಲೆ ಮಲಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಇದ್ದ 152 ತೊಲೆ ಬಂಗಾರ, 79 ಸಾವಿರ ನಗದು ಹಾಗೂ ಬೈಕ್ ಕಳುವು ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀ‌ಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿಸ್ಥಿತಿ ಪರಿಶೀಲಿಸಿದರು. ಸಾರ್ವಜನಿಕರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿಟ್ಟು ಮಹಡಿಯ ಮೇಲೆ ಮಲಗಿದಿರುವಂತೆ ಸಲಹೆ ನೀಡಿದರು.
ರಾಯಚೂರು ನಗರದಲ್ಲೂ ಎರಡು ದಿನಗಳ ಹಿಂದೆ ಈ ರೀತಿಯ ಪ್ರಕರಣ ನಡೆದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರ ವಹಿಸುವಂತೆ ಸಲಹೆ ನೀಡಿದರು. ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆಯೂ ಚಿನ್ನ ಮತ್ತು ಹಣವನ್ನು ಲಾಕರ್‌ಗಳಲ್ಲಿ ಭದ್ರವಾಗಿಡಿವಂತೆಯೂ ತಿಳಿಸಿದರು.

Leave a Comment