ಸಿಂಧನೂರು ಬಂದ್ ಸಂಪೂರ್ಣ ಯಶಸ್ವಿ

ಸಿಂಧನೂರು.ಸೆ.10- ಕೇಂದ್ರ ಸರಕಾರದ ತೈಲ ಬೆಲೆ ಏರಿಕೆ ವಿರೋಧಿಸಿ, ಸಿಂಧನೂರು ಕಾಂಗ್ರೆಸ್ ಪಕ್ಷ ಭಾರತ್ ಬಂದ್‌ಗೆ ಕರೆ ನೀಡಿದ್ದು, ಸಂಪೂರ್ಣ ಯಶಸ್ವಿಯಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ಇಲ್ಲಿವರೆಗೆ ಯಾವುದೇ ಅಂಗಡಿ ಮುಗ್ಗಟ್ಟುಗಳು ತೆರೆಯದೇ ಬಂದ್‌ಗೆ ಸಂಪೂರ್ಣ ಬೆಂಬಲಿಸಿದರು. ಕೆಎಸ್ಆರ್‌ಟಿಸಿ ಬಸ್‌ಗಳು ಬೀದಿಗೆ ಇಳಿಯದೇ ಇರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಹೋರಾಟದ ನೇತೃತ್ವವನ್ನು ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜ್ ಹಿರೇಗೌಡ, ಬಾಬುಗೌಡ ಬಾದರ್ಲಿ, ಆರ್.ತಿಮ್ಮಯ್ಯ ನಾಯಕ, ಎಂ.ದೊಡ್ಡ ಬಸವರಾಜ್, ಜಾಫರ್ ಬಹಾಂಗೀರದಾರ್, ಶೇಖರಪ್ಪ ಗಿಣಿವಾರ, ಹೆಚ್.ಎನ್. ಬಡಿಗೇರ, ಖಾಜಾ ಮಲ್ಲಿಕ್, ಮುರ್ತುಜಾ ವಹಿಸಿದ್ದರು.
ಸಿಪಿಎಂ ಪ್ರತಿಭಟನೆ
ಭಾರತ ಕಮ್ಯೂನಿಸ್ಟ್ ಪಕ್ಷ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಹಾಗೂ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಜಂಟಿಯಾಗಿ ಪ್ರತಿಭಟನೆ ಮಾಡುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶೇಖ್ ಖಾದ್ರಿ, ದೇವೇಂದ್ರ ಗೌಡ, ಡಿ.ಹೆಚ್. ಕಾಂಬ್ಳಿ, ನರಸಿಂಹ, ಯಂಕಪ್ಪ ಕೆಂಗಲ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಸಿಪಿಐ (ಎಂಎಲ್) ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ, ಸಿಪಿಐ(ಎಂಎಲ್) ಪಕ್ಷದಿಂದ ನಗರದ ಗಂಜ್ ವೃತ್ತದಲ್ಲಿ ಪ್ರಧಾನಿ ಮೋದಿ ಮತ್ತು ಅರುಣ್ ಜೆಟ್ಲಿ ಅವರ ಪ್ರತಿಕೃತಿ ದಹನ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ನಾಗರಾಜ್ ಪೂಜಾರ್, ರಮೇಶ ಪಾಟೀಲ್, ಬಿ.ಎನ್.ಹೆರ್ದಾಳ್, ಕಿರಣ ಕುಮಾರ, ಆರ್.ಹೆಚ್ ಕಲ್ಮಂಗಿ, ಶ್ರೀನಿವಾಸ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸಿಪಿಐ ನಾಗರಾಜ್ ಕಮ್ಮಾರ್ ನೇತತ್ವದಲ್ಲಿ ಸೂಕ್ತವಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Leave a Comment