ಸಾಹೋ ಚಿತ್ರದ ವಿಭಿನ್ನ ಅವತಾರದಲ್ಲಿ ಚಂಕಿ ಪಾಂಡೆ

ಮುಂಬೈ, ಜೂ 20 – ತಮ್ಮ ಮುಂಬರುವ ‘ಸಾಹೋ’ ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಬಾಲಿವುಡ್ ಹಾಸ್ಯ ನಟ ಚಂಕಿ ಪಾಂಡೆ ತಿಳಿಸಿದ್ದಾರೆ.

ನಟ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಜೋಡಿಯಲ್ಲಿ ಮೂಡಿಬರಲಿರುವ ಸಾಹೋ ಚಿತ್ರದಲ್ಲಿ ಚಂಕಿ ಪಾಂಡೆ ಕೂಡ ಅಭಿನಯಿಸುತ್ತಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಚಂಕಿ ಪಾಂಡೆ, ”ಆಗಸ್ಟ್ 15ರಂದು ಚಿತ್ರ ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿರುವುದರಿಂದ ಚಿತ್ರದ ಪ್ರಚಾರದಲ್ಲಿ ಹೆಚ್ಚಾಗಿ ನನ್ನನ್ನು ತೋರಿಸುತ್ತಿಲ್ಲ. ಆದರೆ ಸಾಹೋ ಚಿತ್ರದಲ್ಲಿ ಖತರ್ನಾಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಚಿತ್ರದ ನಂತರ ದೀಪಾವಳಿಯಲ್ಲಿ ಬಿಡುಗಡೆಗೊಳ್ಳಲಿರುವ ‘ಹೌಸ್ ಫುಲ್ 4’ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದೇನೆ. ಅಂತೆಯೇ ಮರಾಠಿಯ ಒಂದು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಈ ಚಿತ್ರವನ್ನು ಸಮೀರ್ ಪಾಟೀಲ್ ನಿರ್ದೇಶನ ಮಾಡುತ್ತಿದ್ದಾರೆ” ಎಂದರು.

ನಟ ರಿತೇಶ್ ದೇಶಮುಖ್ ಅವರ ಚಿತ್ರ ನಿರ್ಮಾಣ ಸಂಸ್ಥೆಯಡಿ ಮೂಡಿಬರಲಿರುವ ‘ಬಂಗಾರ್ ವಾಲಾ’ ಚಿತ್ರಕ್ಕೆ ನಿರ್ಮಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಲ್ಲದೇ, ನಟ ಸಂಜಯ್ ದತ್ ಅವರ ‘ಪ್ರಸ್ಥಾನಂ’ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದೇನೆ. ಜನ ಈಗಾಗಲೇ ಹಾಲಿವುಡ್ ಚಿತ್ರಗಳನ್ನು ಜಾಸ್ತಿ ನೋಡುತ್ತಿದ್ದಾರೆ. ಆದ್ದರಿಂದ ವಿಭಿನ್ನವಾಗಿ ನಟಿಸಬೇಕು ಎಂಬುದು ನನ್ನ ಆಸೆಯಾಗಿತ್ತು ಎಂದು ತಿಳಿಸಿದ್ದಾರೆ.

Leave a Comment