ಸಾಹಸಿ ಬಾಲಕನಿಗೆ ಮನೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ರಾಯಚೂರು.ಅ.20- ಕೃಷ್ಣಾ ಪ್ರವಾಹ ಸಂದರ್ಭದಲ್ಲಿ ದೇವದುರ್ಗ ತಾಲೂಕಿನ ಹಿರೇರಾಯಿಕುಂಪಿ ಬಾಲಕ ವೆಂಕಟೇಶ ತಂದೆ ದೇವೇಂದ್ರಪ್ಪ ಇವರು ಆಂಬುಲೆನ್ಸ್‌ಗೆ ದಾರಿ ತೋರಿಸುವ ಮೂಲಕ ಸಾಹಸ ಮೆರೆದಿದ್ದರು.
ಈ ಬಾಲಕನ ಸಾಹಸಕ್ಕೆ ಮೆಚ್ಚಿ ದೇಶಾದ್ಯಂತ ಜನರ ಪ್ರಶಂಸೆ ವ್ಯಕ್ತವಾಗಿತ್ತು. ಕೇರಳದ ನಾಲ್ಕು ಸಂಸ್ಥೆಗಳು ವೆಂಕಟೇಶ ಸಾಹಸಕ್ಕೆ ಮೆಚ್ಚಿ ಹಿರೇರಾಯಿಕುಂಪಿಯಲ್ಲಿ ಅವನಿಗೊಂದು ಮನೆ ಕಟ್ಟಿಕೊಡಲು ತೀರ್ಮಾನಿಸಿತು. ಇಂದು 8 ಜನರ ತಂಡ ಸ್ಥಳ ಪರಿಶೀಲನೆಗೆ ಆಗಮಿಸಿದರು.
ಹೆಲ್ಪಿಂಗ್ ಹ್ಯಾಂಡ್ ಟಾರಿಟೇಬಲ್ ಟ್ರಸ್ಟ್, ಎಂ.ಐ.ಯು.ಪಿ. ಸ್ಕೂಲ್, ಪಿಟಿಎ ಕಮಿಟಿ, ಫೋಕಸ್ ಇಂಡಿಯಾ ಸಂಸ್ಥೆಗಳು ಈ ನೆರವು ನೀಡಲು ಮುಂದಾಗಿವೆ. ಇತ್ತೀಚಿಗಷ್ಟೇ ವೆಂಕಟೇಶರನಿಗೆ ಕೇರಳದಲ್ಲಿ ಸನ್ಮಾನಿಸಿ, ಗೌರವಿಸಲಾಗಿತ್ತು. ಈ ಸಂದರ್ಭದಲ್ಲಿ ಸಾಹಸಿ ಬಾಲಕನಿಗೆ ನೆರವು ನೀಡಲು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಈ ಮೂರು ಸಂಸ್ಥೆಗಳು 4 – 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿವೆ.
ಸ್ಥಳ ಪರಿಶೀಲನೆಗೆ ಆಗಮಿಸಿದವರಲ್ಲಿ ಎನ್‌.ಪಿ.ಶಕೀರ್, ನೌಫಲ್ ಎನ್.ಕೆ., ಇಜಾಜ್ ಕೆಲ್ಯುಕಟ್, ಮಸ್ಜೀದ್, ರಶೀದ್, ಪ್ರಮೋದಕುಮಾರ, ವಿ.ಕೆ. ರಫೀಕ್, ಎನ್.ಪಿ. ಸೈಫುಲ್ಲಾ ಮತ್ತು ಸಂತೋಷ ಅವರು ಸ್ಥಳ ಪರಿಶೀಲಿಸಿದರು.

Leave a Comment