‘ಸಾವಿರ ಹುಣ್ಣಿಮೆಯ ಚಂದಿರನ ನೋಡಿದ ಚಂದಿರ’ ಡಾ. ಬಿ.ಎಫ್ ದಂಡಿನ

ಹುಬ್ಬಳ್ಳಿ,ಆ6:    ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮೀಶಿ ಬಡವರಿಗಾಗಿಯೇ ಕನಕದಾಸ ಶಿಕ್ಷಣ ಸಂಸ್ಥೆಯನ್ನು ಬಡವರ ವಿಶ್ವವಿದ್ಯಾಲಯವನ್ನಾಗಿಸಿದ ಕೀರ್ತಿ ಡಾ. ಬಿ.ಎಫ್ ದಂಡಿನರವರಿಗೆ ಸಲ್ಲುತ್ತದೆ. ಅವರ ಕ್ರೀಯಾಶೀಲತೆ, ಕಾರ್ಯಗತ ಶೈಲಿಯೇ ಅವರು 84 ವಸಂತಗಳನ್ನು ಪೂರೈಸಲು ಸಾಧ್ಯವಾಗಿದೆ. ‘ಸಾವಿರ ಹುಣ್ಣಿಮೆಯ ಚಂದಿರನ ನೋಡಿದ ಚಂದಿರ’ ಡಾ. ಬಿ.ಎಫ್ ದಂಡಿನ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಡಾ. ಬಿ. ಎಫ್ ದಂಡಿನರವರ ಹುಟ್ಟುಹಬ್ಬ ಸಮಾರಂಭ ಅಭಿನಂದನಾ ಸಮಿತಿ ವತಿಯಿಂದ ರವಿವಾರ ನಡೆದ ಡಾ. ಬಿ. ಎಫ್ ದಂಡಿನರವರ 84 ವಸಂತಗಳ ಸಾರ್ಥಕ ಬದುಕಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಡಾ. ದಂಡಿನ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೋಡಗಿಸಿಕೊಳ್ಳುವ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಮುಂದಿನ ವರ್ಷದ ಹುಟ್ಟು ಹಬ್ಬದಲ್ಲಿ ಶೈಕ್ಷಣಿಕ ಚಿಂತನೆಗಳಿಗೆ, ಶೈಕ್ಷಣಿಕ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವಂತೆ ಆಯೋಜಕರಿಗೆ ಸಲಹೆ ನೀಡಿದರು. ಇದೇ ರೀತಿ ದಂಡಿನ ಅವರು 100 ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ.ಪೂ ಶ್ರೀ ಸಿದ್ಧರಾಮ ದೇವರು, ಶ್ರೀ ಅನ್ನ ದಾನೇಶ್ವರ ದೇವಮಂದಿರ ಮಠ, ಮಣಕವಾಡರವರು ಆಶೀರ್ವದಿಸಿದರು.  ಕರ್ನಾಟಕ ಭಾಜಪಾ ಉಪಾಧ್ಯಕ್ಷರಾದ ಮಾ. ನಾಗರಾಜ,ನರಗುಂದ ಶಾಸಕ ಸಿ. ಸಿ. ಪಾಟೀಲ್‍ರು ,ವಿಧಾನ ಪರಿಷತ್ ಸದಸ್ಯರಾದ ಎಸ್ ವ್ಹಿ ಸಂಕನೂರ, ರೋಣ ಶಾಸಕರಾದ ಕಳಕಪ್ಪ ಬಂಡಿ ಮಾತನಾಡಿದರು, ಶಾಸಕರಾದ ರಾಮಣ್ಣ ಲಮಾಣಿ, ಹು-ಧಾ ಮಹಾಪೌರರು ಸುಧೀರ್ ಸರಾಫ, ಉಪ ಮಹಾಪೌರರಾದ ಮನೇಕಾ ಹುರಳಿ, ಹು-ಧಾ ಮ. ಪಾಲಿಕೆಯ ಆರೋಗ್ಯ ಸ್ಥಾಯಿ ಸಮೀತಿಯ ಅಧ್ಯಕ್ಷರಾದ ಶಿವಾನಂದ ಮುತ್ತಣ್ಣನವರ, ಮಾಜಿ ಜಿ.ಪಂ ಅಧ್ಯಕ್ಷರು ಶಕುಂತಲಾಬಾಯಿ ಬಿ. ದಂಡಿನ, ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶಾಂತಣ್ಣ ವಾಯ್. ಕಡಿವಾಳ, ಕನಕದಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ರವಿ. ಬಿ. ದಂಡಿನ, ಕನಕದಾಸ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿಗಳಾದ ಡಾ. ಪುನೀತಕುಮಾರ ಬೆನಕನವಾರಿ ಡಿಡಿಪಿಐ ಎನ್.ಎಚ್.ನಾಗೂರ, ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯ ಸಮೂಹ ವಿದ್ಯಾಲಯಗಳ ಪ್ರಾಚಾರ್ಯರು, ಬೋಧಕ ಬೋಧಕೇತರ ವರ್ಗ, ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಅಪಾರ ಬಂಧು-ಬಳಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗೋಡಿಯವರು ಸ್ವಾಗತಿಸಿದರು, ಶೋಭಾ ಉಜ್ಜಯಿನಿಶೆಟ್ಟರ್ ಪ್ರಾರ್ಥಿಸಿದರು, ಅನೀಲ ವೈದ್ಯ ನಿರೂಪಿಸಿದರು, ರವಿ ದಂಡಿನ ವಂದಿಸಿದರು.
ಬಾಕ್ಸ್ ಐಟಮ್
ಭಕ್ತಕನಕದಾಸ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸುವುದು ನನ್ನ ಕನಸು
ಸ್ನಾತಕೋತ್ತರ ಪದವಿ ಓದಿದ ಅಭ್ಯಾಸಕ್ಕಿಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಜ್ಞಾನದಿಂದ ಒಬ್ಬ ವಿದ್ಯಾರ್ಥಿ ಉತ್ತಮ ವ್ಯಕ್ತಿತ್ವವುಳ್ಳ ಮನುಷ್ಯನಾಗಲು ಸಾಧ್ಯ. ವಿದ್ಯಾರ್ಥಿಯಾಗಿದ್ದಾಗ ಸಾವಿರ ಸಮಸ್ಯೆಗಳನ್ನು ಸತತ ಪ್ರಯತ್ನ ಮತ್ತು ಗುರಿ ಮುಟ್ಟುವ ಚಲದಿಂದ ಎದುರಿಸಿದ್ದಲ್ಲದೇ ಮುಂದೆ ಬಡವಿದ್ಯಾರ್ಥಿಗಳಿಗೆ ನನ್ನ ಸಮಸ್ಯೆಗಳು ಎದುರಾಗಬಾರದೆಂದು  ಶಿಕ್ಷಣ ಸಂಸ್ಥೆ ಆರಂಭಿಸಿದ್ದೇನೆ. ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯನ್ನು ಬೃಹತ್ ವಿಶ್ವವಿದ್ಯಾಲಯವನ್ನು ಮಾಡುವ ಮಹೋತ್ತರ ಉದ್ದೇಶವನ್ನು ಹೊಂದಿದ್ದೇನೆ.
ಡಾ. ಬಿ. ಎಫ್ ದಂಡಿನ, ಅಧ್ಯಕ್ಷರು ಕನಕದಾಸ ಶಿಕ್ಷಣ ಸಂಸ್ಥೆ ಗದಗ

Leave a Comment