ಸಾವಿನ ಸುದ್ದಿ ಬಗ್ಗೆ ಕ್ರಿಕೆಟಿಗ ಸುರೇಶ್ ರೈನಾ ಬೇಸರ

ನವದೆಹಲಿ, ಫೆ 12- ಭಾರತ ತಂಡಕ್ಕೆ ವಾಪಸ್ ಆಗಲು ಪ್ರಯತ್ನ ನಡೆಸುತ್ತಿರುವ ಸುರೇಶ್ ರೈನಾ ಸದ್ಯ ಸುದ್ದಿಯಲ್ಲಿದ್ದಾರೆ. ಸುರೇಶ್ ರೈನಾ ಸಮಸ್ಯೆಯೊಂದರಿಂದ ಬಳಲುತ್ತಿದ್ದಾರೆ. ಫಿಟ್ನೆಸ್ ಸಮಸ್ಯೆ ಅವ್ರನ್ನು ಕಾಡ್ತಿಲ್ಲ. ಬದಲಾಗಿ ಯುಟ್ಯೂಬ್ ನಲ್ಲಿ ಅವ್ರ ಬಗ್ಗೆ ಹರಿದಾಡ್ತಿರುವ ಸುದ್ದಿ, ರೈನಾ ತಲೆ ತಿನ್ನುತ್ತಿದೆ.

ಯುಟ್ಯೂಬ್ ನಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ರೈನಾ ಕಾರು ಅಪಘಾತವಾಗಿದೆ. ರೈನಾ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ರೈನಾ, ಯುಟ್ಯೂಬ್ ನಲ್ಲಿ ಹರಿದಾಡ್ತಿರುವ ಸುದ್ದಿ ಸುಳ್ಳು. ಆತಂಕಗೊಳ್ಳುವ ಅಗತ್ಯವಿಲ್ಲ. ನನ್ನ ಕಾರು ಅಪಘಾತಕ್ಕೀಡಾಗಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.

ಯುಟ್ಯೂಬ್ ನಲ್ಲಿ ಹರಿದಾಡ್ತಿರುವ ಸುದ್ದಿ, ಕುಟುಂಬಸ್ಥರು ಹಾಗೂ ಸ್ನೇಹಿತರ ಆತಂಕಕ್ಕೆ ಕಾರಣವಾಗಿದೆ. ಯಾವ ಚಾನೆಲ್ ಸುದ್ದಿ ಬಿತ್ತರಿಸಿದೆ ಎಂಬುದು ಪತ್ತೆಯಾಗಿದೆ. ಸದ್ಯದಲ್ಲಿಯೇ ಈ ಬಗ್ಗೆ ತನಿಖೆ ನಡೆಯಲಿದೆ ಎಂದು ರೈನಾ ಟ್ವಿಟ್ ಮಾಡಿದ್ದಾರೆ.

Leave a Comment