ಸಾವಿತ್ರಿಬಾಯಿ ಪುಲೆರವರ ಜನ್ಮದಿನಾಚರಣೆ

ಬಳ್ಳಾರಿ, ಜ.8: ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಸಾವಿತ್ರಿಬಾಯಿ ಪುಲೆರವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ನಗರದ ಮಹಿಮೆ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತ್ತು. ಈ ಕಾರ್ಯಕ್ರಮದಲ್ಲಿ ಎಐಡಿಎಸ್ಓ ರಾಜ್ಯ ಅಧ್ಯಕ್ಷರಾದ ಡಾ|| ಪ್ರಮೋದ್ ಮಾತನಾಡುತ್ತ, ಮನುಷ್ಯನಲ್ಲಿ ಮಾನವೀಯತೆ, ಮೌಲ್ಯಗಳನ್ನು ಬೆಳೆಸುವ ಗುರಿ ಶಿಕ್ಷಣ ಪದ್ದತಿ ಹೊಂದಿರಬೇಕು.

ಸಮಾಜದಲ್ಲಿ ಅಸಮಾನತೆ, ಕ್ರೂರ ಜಾತಿ ಪದ್ದತಿಗಳಂತಹ ಪ್ರಗತಿ ವಿರೋಧಿ ಪದ್ದತಿಗಳು ಬದಲಾಗಬೇಕೆಂದರೆ ಅದು ಶಿಕ್ಷಣದಿಂದ ಸಾಧ್ಯ ಎಂದು ಸಾವಿತ್ರಿಬಾಯಿ ಪುಲೆರವರು ಹೇಳುತ್ತಿದ್ದರು. ಮಾನವೀಯತೆ, ಮನುಷ್ಯತ್ವ ಬೆಳೆಸುವುದೇ ಶಿಕ್ಷಣದ ಗುರಿ ಎಂದು ಅವರು ನಂಬಿದ್ದರು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಗೋವಿಂದ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ರಾಜ ಹಾಗೂ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment