ಸಾಲ ಮನ್ನಾ ಶ್ರೀಮಂತರದ್ದು ಬಿಡಿ, ಬಡವರದ್ದು ಮಾಡಿ

ಬಳ್ಳಾರಿ, ಜೂ.12: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭರವಸೆ ನೀಡಿದಂತೆ ರೈತರ ಸಾಲ ಮನ್ನಾ ಮಾಡಲಿ. ಬೇಕಾದರೆ ಇದರಲ್ಲಿ ಶ್ರೀಮಂತ ರೈತರ ಸಾಲ ಬಿಡಿ ಬಡ ರೈತರ ಸಾಲ ಮೊದಲು ಮನ್ನಾ ಮಾಡಿ ಬಡ ರೈತರ ಸಂಕಷ್ಟಕ್ಕೆ ಮುಂದಾಗಬೇಕು ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾಗುತ್ತೆ ಎಂದರು. ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಗೋಣಿಬಸಪ್ಪ ಹೇಳಿದ್ದಾರೆ.

ಅವರಿಂದು ನಗರದಲ್ಲಿ ಸಂಘದ ಮುಖಂಡರುಗಳಾದ ಸಂಗನಕಲ್ಲು ಕೃಷ್ಣಪ್ಪ, ಎಂ.ಎಲ್.ನಾಯ್ಡು, ಜಾಲಿಹಾಳ್ ನಾಗರಾಜ್, ಹೊನ್ನೂರುಸಾಬ್, ಎಱ್ರಿಸ್ವಾಮಿ, ನಾಗರಾಜ್, ಕಪ್ಪಗಲ್ಲು ಓಂಕಾರರೆಡ್ಡಿ, ಮಲ್ಲಿಕಾರ್ಜುನ, ಗೋಪಾಲ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ 2009ರ ಆಚೆಗಿನ ಮತ್ತು 2018ರ ಎಪ್ರಿಲ್ ಅಂತ್ಯದ ವರೆಗಿನ ರೈತರ ಬೆಳೆ ಸಾಲ ಮನ್ನಾ ಆಗಬೇಕು. ಈ ಹಿಂದಿನ ಸಭೆಯಲ್ಲಿ ಚರ್ಚಿಸಿದಂತೆ ಶಾಸಕರ, ಸಂಸದರ, ಸಚಿವರ ಮತ್ತು ಶ್ರೀಮಂತ ರೈತರ ಸಾಲ ಮನ್ನಾ ಮಾಡಬೇಡಿ.

ನೀವು ಬಡ ರೈತರ ಸಾಲ ಮನ್ನಾ ಘೋಷಣೆ ಮಾಡುತ್ತೀರಿ ಎಂದು ದಿನನಿತ್ಯ ಮಾದ್ಯಮಗಳ ಮುಖ ನೋಡಬೇಕಿದೆ. ಇನ್ನು ಹೆಚ್ಚುದಿನ ಕಳೆಯದೆ ಕೂಡಲೇ ಸಣ್ಣ, ಅತಿ ಸಣ್ಣ ಸಂಕಷ್ಟದಲ್ಲಿರುವ ದೊಡ್ಡ ರೈತರ ಸಾಲ ಮನ್ನಾ ಮಾಡಿ ನೆರವಿಗೆ ಬನ್ನಿ, ಬೀಜ, ಗೊಬ್ಬರ, ದನಕರು ಟ್ರ್ಯಾಕ್ಟರ್ ಖರೀದಿಗೆ ಪಡೆದ ಸಾಲವನ್ನು ಪರಿಗಣಿಸಿ ಎಂದರು.
ಸಾಲಮನ್ನಾ ಮಾಡಲು ಮುಂದಾಗದಿದ್ದರೆ ಗ್ರಾಮ ಬಂದ್ ಚಳುವಳಿಯನ್ನು 175 ರೈತ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

Leave a Comment