ಸಾಲಿಗ್ರಾಮ ಸಿಡಿ ಬಿಡುಗಡೆ

ಹೊಸಬರೇ ಸೇರಿಕೊಂಡು ನಿರ್ಮಿಸಿ,ನಿರ್ದೇಶಿಸಿರುವ ’ಸಾಲಿಗ್ರಾಮ’ ಚಿತ್ರ ಪೂರ್ಣಗೊಂಡಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಧ್ವನಿ ಸುರುಳಿ ಬಿಡುಗಡೆ ಮಾಡಿದೆ.

ಸಿಡಿ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ ಚಿನ್ನೇಗೌಡ,ನಟ ಶಿವರಾಜ್ ಕುಮಾರ್,ಕೆ.ಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಸೇರಿದಂತೆ ಮತ್ತಿತರರು ಹೊಸಬರ ತಂಡಕ್ಕೆ ಶುಭಕೋರಿಚಿತ್ರ ಯಶಸ್ವಿಯಾಗಲಿ ಎಂದು ಹರಸಿ ಹಾರೈಸಿದರು.

saligrama_127

ಚಿತ್ರದಲ್ಲಿ ಸಿದ್ದಾರ್ಥ್ ಮಾಧ್ಯಮಿಕ್ ನಾಯಕನಾಗಿ ಗುರತಿಸಿಕೊಳ್ಳಲು ಮುಂದಾಗಿದ್ದು,ಅವರಿಗೆ ನಾಯಕಿಯರಾಗಿ ದಿಶಾ ಪೂವಯ್ಯ ಮತ್ತು ಪಲ್ಲವಿ ರಾಜು ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಹರ್ಷ ನಾರಾಯಣಸ್ವಾಮಿ ನಿರ್ಮಾಣ ಮಾಡಿ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ಸಿಡಿ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಅವರು,ಒಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ಚಿತ್ರ ನಿರ್ಮಾಣ ಮಾಡಿದ್ದೇನೆ.ನಾಯಕ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲವನ್ನು ನಾಯಕ ಈ ಜನ್ಮದಲ್ಲಿಯೂ ಅನುಭವಿಸುತ್ತಾನೆ ಅದು ಹೇಗೆ ಅದರಿಂದ ಆತನ ಕುಟುಂಬ ಹೇಗೆಲ್ಲಾ ಸಮಸ್ಯೆಗೆ ಸಿಲುಕುತ್ತದೆ

ಅದರಿಂದ ಹೇಗೆ ಪಾರಾಗಿ ಬರುತ್ತಾನೆ ಎನ್ನುವುದ ಸುತ್ತಾ ಕಥೆ ಸಾಗಿದೆ ಎಂದು ಹೇಳಿಕೊಂಡರು.

ಬಾರೀ ಸಂಖ್ಯೆ ಜನರ ಮುಂದೆ ನಿಂತಿದ್ದು ಮಾತೇ ಬರುತ್ತಿಲ್ಲ ಚಿತ್ರಕ್ಕೆ ಎಲ್ಲರ ಬೆಂಬಲ ಬೇಕು ಎಂದು ನಟ ಸಿದ್ದಾರ್ಥ್ ಮಾಧ್ಯಮಿಕ್ ಹೇಳಿಕೊಂಡರೆ, ನಟಿಯರಾದ ದಿಶಾ ಪೂವಯ್ಯ ಮತ್ತು ಪಲ್ಲವಿ ಪಾತ್ರ ಬಗ್ಗೆ ವಿವರ ನೀಡಿದರು.ಸನ್ನಿರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Leave a Comment