ಸಾಲಮನ್ನಾಕ್ಕೆ ರೈತರಿಂದ ಅರ್ಜಿ 25 ರಂದು

ಕಲಬುರಗಿ ಅ 12:ಪ್ರತಿ ರೈತರ ಜಮೀನಿಗೆ ನೀರು, ಪ್ರತಿ ಬೆಳೆಗೆ ನ್ಯಾಯಯುತ ಬೆಲೆ ನೀಡುವವರೆಗೂ ಸರಕಾರಿ ನೌಕರರಿಗೆ ಸಮಾನವಾಗಿ ರೈತರ ವಾರ್ಷಿಕ ಆದಾಯ ಹೆಚ್ಚಿಸವವರೆಗೂ ರೈತರ ಸಂಪೂರ್ಣ ಸಾಲಗಳನ್ನು ಸರಕಾರವೇ ತಿರುವಳಿ ಮಾಡಬೇಕೆಂದು ಆಗ್ರಹಿಸಿ ಸಾವಿರಾರು ರೈತರು ಮತ್ತು ರೈತ ಮಹಿಳೆಯರಿಂದ ರೈತ ಸಾಲ ಮನ್ನಾಕ್ಕೆ ಅರ್ಜಿ ಹಾಕುವ ಕಾರ್ಯಕ್ರಮ ಅ.25 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಎನ್ ವಿ ಕಾಲೇಜು ಮೈದಾನದಲ್ಲಿ ನಡೆಯಲಿದೆ.ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಕೋಲಾರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಕಾರ್ಯಕ್ರಮವನ್ನು ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರು ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಬಸ್ಸುಗೌಡ ಬಿರಾದಾರ ಗಂವ್ಹಾರ ಅವರು ಅಧ್ಯಕ್ಷತೆ ವಹಿಸುವರು ಎಂದರು
ರೈತರಿಗೆ ಶೇ50 ಲಾಭಾಂಶ ನೀಡುವದಾಗಿ ಹೇಳಿದ ಕೇಂದ್ರಸರಕಾರ ನುಡಿದಂತೆ ನಡೆದಿಲ್ಲ.ಕಾರ್ಪೋರೇಟ್ ಕಂಪನಿಗಳ ಸಾಲಮನ್ನಾ ಮಾಡಿ ರೈತರ ಸಾಲಮನ್ನಾಕ್ಕೆ ಆಸಕ್ತಿ ತೋರಿಲ್ಲ.ನವೆಂಬರ್ 20 ರಂದು ದೇಶದ 170 ರೈತ ಸಂಘಗಳು ಸೇರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಿವೆ ಎಂದರು
ಸುದ್ದಿಗೋಷ್ಠಿಯಲ್ಲಿ ಬಸ್ಸುಗೌಡ ಬಿರಾದಾರ, ಲಕ್ಷ್ಮೀ ಹಾಲಭಾವಿ, ಮಹಾಂತಯ್ಯಸ್ವಾಮಿ ಹಿರೇಮಠಭಂಕೂರ, ಅಲ್ಲಾಪಟೇಲ ಇಜೇರಿ,ಬಾಬುಗೌಡ ಪಾಟೀಲ ,ಅನಿಲ ಸಜ್ಜನ ಸೇರಿದಂತೆ ಹಲವರಿದ್ದರು

Leave a Comment