ಸಾಲಮನ್ನಾಕ್ಕೆ ಕೇಂದ್ರದ ನಿರುತ್ತರ:ಟೀಕೆ

ಕಲಬುರಗಿ ಏ 21: ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕುಗಳ ರೈತಸಾಲಮನ್ನಾ ಮಾಡಲು ಮುಂದಾದರೆ, ರಾಜ್ಯ ಸರಕಾರ ಸಹಕಾರಿ ಸಾಲ ಮನ್ನಾ ಮಾಡಲಿದೆ ಎಂದು ರಾಜ್ಯ ಸರಕಾರ ಬರೆದ ಪತ್ರಕ್ಕೆ ಕೇಂದ್ರದಿಂದ ಯಾವುದೇ ಉತ್ತರವಿಲ್ಲ ಎಂದು ಕೆಪಿಸಿಸಿ ಕಿಸಾನ ಖೇಥ ಮಜದೂರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ ಮೇಘಾ ಅವರು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಫಸಲಭೀಮಾ ಯೋಜನೆ ಒಂದು ಅವೈಜ್ಞಾನಿಕ ಯೋಜನೆಯಾಗಿದ್ದು ಅದರ ಮಾನದಂಡ ಬದಲಿಸಬೇಕು.ಜೀವವಿಮಾ, ವಾಹನ ವಿಮೆಯಂತೆ ರೈತರ ವೈಯಕ್ತಿಕ ನಷ್ಟಕ್ಕೆ ಈ ಯೋಜನೆಯ ವಿಮಾಹಣ ಬರುವಂತಾಗಬೇಕು.ಎಂದು ಆಗ್ರಹಿಸಿದರು.
ಉತ್ತರ ಪ್ರದೇಶದ ರೈತರ ಸಾಲಮನ್ನಾ ಮಾಡಿ ಕೇಂದ್ರ ಸರಕಾರ ದೇಶದ ರೈತರನ್ನು ಒಡೆಯಲು ಯತ್ನಿಸುತ್ತಿದೆ ಎಂದ ಅವರು ಕೇಂದ್ರದ ರೈತ ವಿರೋಧಿ ಧೋರಣೆ ಖಂಡಿಸಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಸಹಸ್ರಾರು ರೈತರೊಂದಿಗೆ ಪಾರ್ಲಿಮೆಂಟ್ ಮುತ್ತಿಗೆ ಹಾಕಲಾಗುವದು ಎಂದರು
ಸುದ್ದಿಗೋಷ್ಠಿಯಲ್ಲಿ ಕಿಸಾನ ಮತ್ತು ಕೃಷಿ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಪಂಚಾಳ,ರಮೇಶ ಲೋಹಾರ,ಬಸವರಾಜಯ್ಯಸ್ವಾಮಿ ಬದ್ದೇಪಲ್ಲಿ ಸೇರಿದಂತೆ ಇತರರಿದ್ದರು

Leave a Comment