ಸಾಲಬಾಧೆ ವ್ಯಕ್ತಿ ನೇಣು

ಮುಂಡಗೋಡ.ಮಾ.14- ಸಾಲಬಾಧೆ ತಾಳಲಾರದೇ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗಣೇಶಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಗಣೇಶಪುರ ಗ್ರಾಮದ ಪುಂಡಲೀಕ್ ಹನುಮಂತಪ್ಪ ಹಾನಗಲ್ (35)ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನು ಬೇರೆ ವ್ಯಕ್ತಿಗಳಿಂದ ಸಾಲಪಡೆದಿದ್ದ ಎನ್ನಲಾಗಿದ್ದು ಆ ಸಾಲವನ್ನು ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು  ಮನನೊಂದು  ಸೋಮವಾರ ತಡರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮಂಗಳವಾರ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment