ಸಾಲಬಾಧೆಗೆ ಮೂವರು ರೈತರ ಆತ್ಮಹತ್ಯೆ

ನವಲಗುಂದ/ಅಣ್ಣಿಗೇರಿ,ಅ16: ಸಾಲಬಾಧೆ ತಾಳದೆ ನವಲಗುಂದ ತಾಲೂಕಿನ ತಡಹಾಳ ಹಾಗೂ ಸೊಟಕನಾಳ ಗ್ರಾಮದಲ್ಲಿ ಇಬ್ಬರು ಹಾಗೂ ಅಣ್ಣಿಗೇರಿಯಲ್ಲಿ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೊಟಕನಾಳ ಗ್ರಾಮದ ಮೌಲಾಸಾಬ ಹೈದರಸಾಬ ಮುಲ್ಲಾನವರ (21), ತಡಹಾಳದ ಉಮೇಶ ಬಳೂಲಿ (46) ಹಾಗೂ ಅಣ್ಣಿಗೇರಿಯ ರಾಮಣ್ಣ ಮರಿಯಪ್ಪ ದ್ಯಾವನೂರ (50)ಮೃತಪಟ್ಟವರು.
ಮೌಲಾಸಾಬ: ಎರಡು ಎಕರೆ ಜಮೀನು ಹೊಂದಿದ್ದ ಮೌಲಾಸಾಬ, ಸೊಟಕನಾಳ ಗ್ರಾಮದ ಕೆವಿಜಿ ಬ್ಯಾಂಕ್ನಲ್ಲಿ 1.50 ಲಕ್ಷ ರೂ. ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳಿಂದ 90 ಸಾವಿರ ರೂ. ಸೇರಿ 2.40 ಲಕ್ಷ ರೂ. ಸಾಲ ಮಾಡಿದ್ದನು. ಅತಿವೃಷ್ಟಿ ಹಾಗೂ ಬೆಣ್ಣಿಹಳ್ಳದ ಪ್ರವಾಹದಿಂದಾಗಿ ಈರುಳ್ಳಿ ಮತ್ತು ಹತ್ತಿ ಬೆಳೆ ನಾಶವಾಗಿತ್ತು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೃಷಿ ಹೊಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾಲ್ಕೈದು ದಿನಗಳ ಹಿಂದೆ ಮನೆಯಿಂದ ಹೊರಗೆ ಹೋಗಿದ್ದ ಮೌಲಾಸಾಬ ಮರಳಿ ಬಂದಿರಲಿಲ್ಲ. ಕುಟುಂಬಸ್ಥರು ಮತ್ತು ಸಂಬಂಧಿಕರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ನಡೆಸಿದ್ದರು. ಗ್ರಾಮದ ಹೊರವಲಯದ ಕೃಷಿ ಹೊಂಡದಲ್ಲಿ ಶವ ತೇಲಿರುವ ಕುರಿತು ಗ್ರಾಮಸ್ಥರು ಪೊಲೀಸರು ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಉಮೇಶ ಬಳೂಲಿ: 24 ಎಕರೆ ಜಮೀನು ಹೊಂದಿದ್ದು, ನವಲಗುಂದ ಪಟ್ಟಣದ ಎಸ್ಬಿಐ ಬ್ಯಾಂಕ್ನಲ್ಲಿ 4 ಲಕ್ಷ ರೂ, ತಡಹಾಳ ಗ್ರಾಮದ ಕೆವಿಜಿ ಬ್ಯಾಂಕ್ನಲ್ಲಿ 1.70 ಲಕ್ಷ ರೂ, ಸೊಸೈಯಿಟಿಯಲ್ಲಿ 70 ಸಾವಿರ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ತನ್ನ ಸಾವಿನ ಬಗ್ಗೆ ಉಮೇಶ ಡೆತ್ ನೋಟ್ ಬರೆದಿಟ್ಟಿದ್ದಾನೆ. ‘ನಾನು ಮಾಡಿದ ಸಾಲದ ಬಗ್ಗೆ ನನ್ನ ಹೆಂಡತಿ ಸುಜಾತ ಬಳೂಲಿ ಪದೇ ಪದೆ ಕೇಳುತ್ತಿದ್ದಳು. ಎಲ್ಲೆಲ್ಲಿ ಸಾಲ ಮಾಡಿದ್ದೀರಿ, ಅದನ್ನು ತೀರಿಸುವುದು ಹೇಗೆ ಎಂದು ಕಿರುಕುಳ ನೀಡುತ್ತಿದ್ದಳು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡೂ ಗ್ರಾಮಕ್ಕೆ ಸಿಪಿಐ ರಂಗನಾಥ ನೀಲಮ್ಮನವರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನವಲಗುಂದ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ರಾಮಣ್ಣ ದ್ಯಾವನೂರ: ಪಟ್ಟಣದ ಮಣಕವಾಡ ರಸ್ತೆಯಲ್ಲಿ 9 ಎಕರೆ 7ಗುಂಟೆ ಜಮೀನು ಹೊಂದಿದ್ದು, ಹತ್ತಿ, ಮೆಣಸಿನಕಾಯಿ ಹಾಗೂ ಉಳ್ಳಾಗಡ್ಡಿ ಬೆಳೆದಿದ್ದರು. ಸತತ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತು ಬೆಳೆ ಹಾಳಾಗಿತ್ತು. ಇದರಿಂದ ಚಿಂತೆಗೀಡಾಗಿದ್ದರು ಎಂದು ಮೃತ ರೈತನ ಪತ್ನಿ ಸುಮಿತ್ರಾ ದ್ಯಾವನೂರ ಅಣ್ಣಿಗೇರಿ

Leave a Comment