ಸಾಲದ ಬಾಧೆ ಬಡಗಿ ನೇಣು

ಬೆಂಗಳೂರು, ಮೇ ೧೬- ಸಾಲದ ಬಾಧೆಯಿಂದ ನೊಂದ ಬಡಗಿಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ಮಾರತ್‌ಹಳ್ಳಿಯ ಮಂಜುನಾಥ್ ನಗರದಲ್ಲಿ ನಡೆದಿದೆ.

ಮಂಜುನಾಥ್ ನಗರದ ಬಾಬು (36) ಆತ್ಮಹತ್ಯೆ ಮಾಡಿಕೊಂಡವರು. ಸರಿಯಾಗಿ ಕೆಲಸ ಸಿಗದೆ ಅವರಿವರ ಬಳಿ ಸಾಲ ಮಾಡಿಕೊಂ‌ಡಿದ್ದ ಬಾಬು, ಸಾಲ ಕೊಟ್ಟವರು ವಾಪಸ್ ಕೊಡುವಂತೆ ಒತ್ತಡ ತರುತ್ತಿದ್ದರು.

ಸಾಲಗಾರರ ಒತ್ತಡದಿಂದ ನೊಂದ ಬಾಬು, ನಿನ್ನೆ ಮಧ್ಯಾಹ್ನ 4.30ರ ವೇಳೆ ಪತ್ನಿ ಸವಿತಾ ಸೇರಿ ಕುಟುಂಬದವರೆಲ್ಲ ಹೊರಗೆ ಹೋಗಿದ್ದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿರುವ ಹೆಚ್‌ಎಎಲ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment