‘ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಬೇಡ’

ಹರಪನಹಳ್ಳಿ.ಸೆ.8; ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸುವ ಸ್ಥಳದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಬಾರದು ಎಂದು ಡಿವೈಎಸ್ಪಿ ನಾಗೇಶ್ ಐತಾಳ್ ಹೇಳಿದರು.
ಪಟ್ಟಣದ ಡಿವೈಎಸ್ಪಿ ಕಛೇರಿ ಅವರಣದಲ್ಲಿ ಪೊಲೀಸ್ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬ ಒಟ್ಟಿಗೆ ಬಂದಿರುವುದರಿಂದ ಹಿಂದು ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಹಬ್ಬಗಳನ್ನು ಆಚರಣೆ ಮಾಡಬೇಕು. ಯಾವುದೇ ಹಬ್ಬಗಳಿರಲಿ ಎಲ್ಲಾ ಶಾಂತಿ, ಸೌಹಾರ್ದತೆಯಿಂದ ಆಚರಿಸುವ ಮೂಲಕ ಇತತರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಸಿಪಿಐ ಡಿ.ದುರಗಪ್ಪ ಮಾತನಾಡಿ ಗಣೇಶನ ಹಬ್ಬದಲ್ಲಿ ಯಾವುದೇ ರೀತಿ ಅಸಭ್ಯವಾಗಿ ವರ್ತಿಸಬಾರದು. ಕಡ್ಡಾಯವಾಗಿ ಪರವಾನಿಗೆ ಪಡೆದು ಗಣೇಶನ ಮೂರ್ತಿ ಪ್ರತಿಷ್ಠಾಪಿಸಬೇಕು. ಗಣೇಶ ವಿಸರ್ಜನೆ ವೇಳೆ ಕರ್ಕಶ ಧ್ವನಿವರ್ಧಕ ಬಳಸುವಂತಿಲ್ಲ, ಸಿಡಿಮದ್ದು ಮತ್ತು ಡಿಜೆ ಸೌಂಡ್ ಹಾಕಿಕೊಂಡು ಇತರರಿಗೆ ತೊಂದರೆ ಕೊಡಬಾರದು. ಮೆರವಣಿಗೆ ವೇಳೆ ವಾಹನಗಳಿಗೆ ತೊಂದರೆಯಾಗದಂತೆ ನಿಗಾವಗಿಸಬೇಕು. ಅಹಿತರಕರ ಘಟನೆಗಳಿಗೆ ಅವಕಾಶ ನೀಡಿದೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಡಾ.ಮಧು ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದಾಗಿದೆ. ಸಾಂಸಕೃತಿಕವಾಗಿ ರ್ಶರೀಮಂತವಾಗಿರುವ ನಮ್ಮ ದೇಶದಲ್ಲಿ ಹಬ್ಬಗಳಿಗೆ ವಿಶಿಷ್ಠ ಸ್ಥಾನವಿದೆ. ಪೊಲೀಸ್, ತಾಲೂಕು ಆಡಳಿತಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಪಿಎಸ್‍ಐ ಉಮೇಶ್, ಬೆಸ್ಕಾಂ ಎಇಇ ಭೀವiಪ್ಪ, ಪುರಸಭೆ ಅಧಿಕಾರಿ ಪ್ರಭು, ಭಜರಂಗದಳದ ಅಧ್ಯಕ್ಷ ಹನುಮಂತಪ್ಪ, ವಕೀಲ ಡಿ.ಅಬ್ದುಲ್‍ರಹಿಮಾನ್, ಅಂಜುಮನ್ ಸಮಿತಿ ಅಧ್ಯಕ್ಷ ಸಿ.ಜಾವೀದ್, ಮಲ್ಲೇಶ್, ಮಹಬೂಬ್‍ಸಾಬ್ ಮಾತನಾಡಿದರು, ಅಬಕಾರಿ ಅಧಿಕಾರಿ ಸಾವಿತ್ರಿ, ಅಗ್ನಿ ಶಾಮಕ ದಳ ನಾಗರಾಜ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Comment