ಸಾರ್ವಜನಿಕ ವಲಯದ ಬ್ಯಾಂಕ್ ಮುಖ್ಯಸ್ಥರೊಂದಿಗೆ ನಾಳೆ ನಿರ್ಮಲಾ ಸಭೆ

ನವದೆಹಲಿ, ಡಿ 27 – ಆರ್ಥಿಕ ಪ್ರಗತಿ, ಬಜೆಟ್ ತಯಾರಿಕೆಯ ಹಿನ್ನಲೆ , ಸಾಲ ವಿತರಣೆಯಲ್ಲಿನ ಪ್ರಗತಿ ,ಆಗಿರುವ ಸಾಧನೆ ಪರಿಶೀಲಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಾಳೆ ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದಾರೆ.

ಫೆಬ್ರವರಿ 1 ರಂದು ತನ್ನ ಎರಡನೇ ಪೂರ್ಣ ಬಜೆಟ್ ಅನ್ನು ಮಂಡಿಸಲು ಸಚಿವರು ಎಲ್ಲಾ ತಯಾರಿ ನಡೆಸುತ್ತಿರುವಾಗಲೇ ಈ ಸಭೆಯೂ ನಡೆಯುತ್ತಿದೆ.ಬೇಡಿಕೆ, ಮತ್ತು ಉತ್ಪಾದನೆ ಹೆಚ್ಚಿಸುವಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, 2020-21ರ ಬಜೆಟ್‌ಗೆ ಮುಂಚಿತವಾಗಿ ಪಿಎಸ್‌ಬಿಗಳ ಎಂಡಿ ಮತ್ತು ಸಿಇಒಗಳೊಂದಿಗಿನ ಸಭೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ ಎಂದೂ ಉನ್ನತ ಮೂಲಗಳು ತಿಳಿಸಿವೆ.
ಸಭೆಯು ಎನ್‌ಸಿಎಲ್‌ಟಿ ಮತ್ತು ಎನ್‌ಸಿಎಲ್‌ಟಿ ಅಲ್ಲದ ಎರಡೂ ವಿಧಾನಗಳ ಮೂಲಕ ಮಸೂಲಾಗದ ಸಾಲ , ಮರು ಪಾವತಿ ವಿಧಾನ ಕುರಿತು ಮಹತ್ವದ ಚರ್ಚೆಯನ್ನು ನಡಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ನಾಲ್ಕು ಹಣಕಾಸು ವರ್ಷಗಳಲ್ಲಿ ಬ್ಯಾಂಕುಗಳು 4,01,393 ಕೋಟಿ ರೂ. ವಸೂಲಿ ಮಾಡಿವೆ ಎಂಬುದು ಇಲ್ಲಿ ಪ್ರಮುಖ ಸಂಗತಿಯಾಗಿದೆ.
ಆರ್ಥಿಕ ಬೆಳವಣಿಗೆ ದರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರು ವರ್ಷಗಳಿಗಿಂತಲೂ ಕಡಿಮೆ ಶೇಕಡಾ 4.5 ಕ್ಕೆ ಇಳಿದಿದೆ, ಈ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Leave a Comment