ಸಾರ್ವಜನಿಕರಿಂದ ಪಂಚಾಯ್ತಿ ಅಧಿಕಾರಿ ಮೇಲೆ ದೂರು

ಚಿತ್ರದುರ್ಗ.ಏ,21 ; ಜಿಲ್ಲಾ ಹಿರೇಹಳ್ಳಿ ಪಿಡಿಓ ಮೋಹನ್‍ದಾಸ್ ಇವರು ಇತ್ತೀಚೆಗೆ ಅಂದರೆ 8 ರಿಂದ 10ದಿನಗಳಿಂದ ಪಂಚಾಯ್ತಿಗೆ ಪಿಡಿಓ ಅಗಿ ಕಾರ್ಯನಿರ್ವಹಿಸುತ್ತಿದ್ದು ಸರಿಯಷ್ಠೆ. ಈ ಪಿಡಿಓ ಬಂದಾಗಿನಿಂದ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯಗಳ ಬಿಲ್ಲು, ಉದ್ಯೋಗಖಾತ್ರಿ ಕೆಲಸಕಾರ್ಯಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಸಾರ್ವಜನಿಕರು ಕೇಳಿದರೆ ನಾನು ಮಾಜಿ ಸೈನಿಕ,  ನನ್ನನ್ನು ಏನೆಂದು ತಿಳಿದಿದ್ದೀರಿ.

ನಾನು ಸಾಮಾನ್ಯ ಅಧಿಕಾರಿಯಲ್ಲ ನನ್ನ ಹತ್ತಿರ ಗತ್ತು ಇರುತ್ತದೆ. ಯಾರು ಬಂದರೂ ಮರ್ಯಾದೆಯಿಂದ ಇರಬೇಕು, ನಾನು ಯಾವ ಅಧ್ಯಕ್ಷ, ಸದಸ್ಯರಿಗೂ ಕೇರು ಮಾಡುವುದಿಲ್ಲ. ಮೇಲಾಧಿಕಾರಿಗಳಿಗೆ ಲಂಚ ಕೊಟ್ಟು ಈ ಪಂಚಾಯ್ತಿಗೆ ಹಾಕಿಸಿಕೊಂಡಿದ್ದೇನೆ. ಆದ್ದರಿಂದ ನನಗೆ ಪ್ರತಿಕೆಲಸಕ್ಕೆ ಲಂಚಕೊಟ್ಟರೆ ಮಾತ್ರ ಕೆಲಸ ಮಾಡಿಕೊಡುತ್ತೇನೆ. ಇಲ್ಲವಾದರೆ ಇಲ್ಲ ಎಂದು ಸಾರ್ವಜನಿಕವಾಗಿ ಮಾತನಾಡುತ್ತಿದ್ದಾನೆ. ಆದ್ದರಿಂದ ದಯಮಾಡಿ ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುವುದೇನೆಂದರೆ, ಮೋಹನ್‍ದಾಸ್ ಪಿಡಿಓ ಹಿರೇಹಳ್ಳಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಗತ್ತಿನಿಂದ ನಾನು ಮಾಜಿಸೈನಿಕ ಎಂದು ಹೇಳಿಕೊಂಡು ದರ್ಪದಿಂದ ಮಾತನಾಡುತ್ತಾನೆ. ಸದರಿ ಪಿಡಿಓ ರವನ್ನು ವರ್ಗಾವಣೆ ಮಾಡಿ ಸಾರ್ವಜನಿಕರಿಗೆ ಸ್ಪಂದಿಸುವಂತಹ ಅಧಿಕಾರಿಯನ್ನು ನೇಮಕ ಮಾಡಿಕೊಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇವೆ.ಗ್ರಾಮದ ಮುಖಂಡರುಗಳಾದ ಬಾಲಚಂದರ್ ಮಲ್ಲೇಶಪ್ಪ, ಡಿ.ಎಸ್.ಎಸ್. ರಾಜಣ್ಣ, ಚಿಕ್ಕರಾಜು, ಮಂಜುನಾಥ್ ಸುಮಾರು 50ಕ್ಕೂ ಹೆಚ್ಚು ಜನ ಇದ್ದರು.

Leave a Comment