ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಸಾಧ್ಯ

ಹರಪನಹಳ್ಳಿ.ಫೆ.13; ತಾಲೂಕಿನ ನೀಲಗುಂದ ಗುಡ್ಡದ ಸಂಸ್ಥಾನ ಜಂಗಮ ಪೀಠದ 2018 ಜಂಗಮ ಜಾತ್ರೆ, ಶ್ರೀ ಚನ್ನಬಸವ ಶಿವಯೋಗಿಗಳು ಮತ್ತು ಚರಜಂಗಮ ಶ್ರೀ ಕೊಟ್ಟೂರೇಶ್ವರ ಸ್ಮರಣೋತ್ಸವ ಹಾಗೂ ಧಾರ್ಮಿಕ ಮತ್ತು 40ಜೋಡಿಯ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಧರ್ಮ ಪರೀಷತ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ವಧು ವರರಿಗೆ ಶುಭಹಾರೈಸಿ ಮಾತನಾಡಿದ ಅವರು ಆಡಂಭರದ ಮದುವೆಯಿಂದ ದೂರವಿದ್ದು, ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ, ಇಂತಹ ವಿವಾಹಗಳು ಮಧ್ಯಮ ಹಾಗೂ ಬಡವರ ಅನುಕೂಲವಾಗುವುದರ ಜೊತೆಯಲ್ಲಿ ಸಾಲದಿಂದ ದೂರ ವಿರಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು ಸತಿ-ಪತಿಗಳು ಅನೋನ್ಯವಾಗಿದ್ದಾಗ ಮಾತ್ರ ಸಾರ್ಥಕತೆಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಕಂದಾಯ ಸಚಿವ ಜಿ.ಕರುಣಾರರೆಡ್ಡಿ ಮಾತನಾಡಿ, ಪ್ರತಿಯೊಂದು ಜಾತಿ, ಮತ, ಬೇಧ-ಭಾವವನ್ನು ದೂರು ಮಾಡುವ ಕೇಲಸವನ್ನು ಇಂದು ಮಠಗಳು ಮಾಡುತ್ತಿದ್ದು ಈ ನಿಟ್ಟಿನಲ್ಲಿ ನೀಲಗುಂದ ಮಠವು ಕೂಡ ಅನೇಕ ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾದದ್ದು ಎಂದ ಅವರು ಸರಕಾರ ಇಂತಹ ವಿವಾಹಗಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ, ನಂತರ ಹೆಣ್ಣು ಮಗುವಿಗೆ ಭಾಗ್ಯಲಕ್ಷಿö್ಮಬಾಂಡ್ ನೀಡುತ್ತಿದೆ ಅನೇಕ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಲಿಂಗನಾಯ್ಕನಹಳ್ಳಿ ಶ್ರೀ ಚನ್ನವೀರ ಶಿವಯೋಗಿಗಳು ಆದ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಕಾರ ಬೆಳೆಸಿಕೊಳ್ಳಬೇಕು ನಮ್ಮಲ್ಲಿ ಆಗಾದವಾದ ಶಕ್ತಿ ಹುಟ್ಟಿಕೊಳ್ಳುತ್ತದೆ, ಸಂಸ್ಕಾರಕ್ಕೆ ಮಹತ್ವವಿದೆ ಈ ಸಂಸ್ಕಾರ ಬೆಳೆಯಲು ಕಳೆದ 32 ವರ್ಷಗಳಿಂದ ಸಮಾಜದ ಏಳಿಗೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಚನ್ನಬಸವಶ್ರೀಗಳ ಕಾರ್ಯ ಮೆಚ್ಚುವಂತದ್ದು ಎಂದ ಅವರು ಶ್ರದ್ದೆ, ಕಾಯಕ, ಶಿಸ್ತನ್ನು ಅಳವಡಿಸಿಕೊಂಡು ಧಾರ್ಮಿಕ ಜಾಗೃತಿಯನ್ನು ಇಂತಹಕಾರ್ಯಕ್ರಮದ ಮೂಲಕ ತಿಳಿಸುತ್ತಿದ್ದು ನವದಂಪತಿಗಳು ಸಂಸ್ಕಾರವಂತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಎಂ.ವಿ.ಅಂಜಿನಪ್ಪ ಮಾತನಾಡಿ ಗುರುಗಳು ಕೇವಲ ಮಠಕ್ಕೆ ಸೀಮಿತರಲ್ಲ ಎಂಬುದಕ್ಕೆ ನೀಲಗುಂದ ಶ್ರೀಗಳಾಗಿದ್ದು ಇವರು ತಾಲೂಕಿನ ಸಾಮಾಜಿಕ ಕಳಕಳಿಯನ್ನು, ಅಭಿವೃದ್ಧಿ ನಿಟ್ಟಿನಲ್ಲಿ 371ಜೆ ಸೌಲಭ್ಯ ಕಲ್ಪಿಸಲು ಉಪವಾಸ ಸತ್ಯಗ್ರಹ ನಡೆಸಿದ್ದನ್ನು ಸ್ಮರಿಸಿದ ಅವರು ಕ್ಷೇತ್ರ ಶಾಸಕ ಎಂ.ಪಿ.ರವೀಂದ್ರರವರು ಕೂಡ ಈ ಗ್ರಾಮಕ್ಕೆ ಗ್ರಾಮವಿಕಾಸ ಯೋಜನೆಯಲ್ಲಿ 1ಕೋಟಿ ಅನುದಾನ, ಅಂಗನಾವಡಿ, ವಿವಿಧ ಯೋಜನೆಯಲ್ಲಿ 10ಲಕ್ಷ ಅನುದಾನ ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸೋಣ ಎಂದರು.
ಈ ಸಂದರ್ಭದಲ್ಲಿ ನೀಲಗುಂದ ಮಠದ ಶ್ರೀ ಚನ್ನಬಸವ ಶೀವಯೋಗಿಗಳು, ಅನ್ವೇರಿ ಶ್ರೀಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೆಲೂರು ಅಂಜಪ್ಪ, ಗುಂಡಗತ್ತಿ ಕೊಟ್ರಪ್ಪ, ನಂದಿಪುರದ ಚರಂತೇಶ್ ಸ್ವಾಮಿ, ಕಡ್ಲಬಾಳು ಸೋಮಶಂಕರದೇವರು, ಗ್ರಾ.ಪಂ. ಅಧ್ಯಕ್ಷೆ ಟಿ.ಲೀಲಾವತಿ, ಬಿಜೆಪಿ ಮುಖಂಡರಾದ ಕಣಿವಿಹಳ್ಳಿ ಮಂಜುನಾಥ, ನಿಟ್ಟೂರು ಹಾಲಪ್ಪ, ಬಿ.ಕರಿಬಸಪ್ಪ, ಕೆ.ಲಕ್ಷö್ಮಣ, ಜೆಡಿಎಸ್ ಮುಖಂಡ ಮುತ್ತಿಗಿ ವಾಗೀಶ್, ರೇವಣಸಿದ್ದಪ್ಪ, ಕಾಂಗ್ರೆಸ್‍ನ ವಾಗೀಶ್, ಗ್ರಾ.ಪಂ ಸದಸ್ಯ ವಿ.ತಿರುಪತಿ, ಮಾಳಗಿ ಚೌಡಪ್ಪ, ಆನಂದ ಡೊಳ್ಳಿನ, ಮತ್ತಿತರರು ಇದ್ದರು.
ಪೋಟೊ: ಹರಪನಹಳ್ಳಿ: ತಾಲೂಕಿನ ನೀಲಗುಂದ ಗ್ರಾಮದಲ್ಲಿ ಸಾಮೂಹಿಕ ವಿವಾಹಗಳು ಜರುಗಿದವು.

Leave a Comment