ಸಾಮೂಹಿಕ ವಲಸೆ ತಡೆಗಟ್ಟಲು ಒತ್ತಾಯಿಸಿ ಪತ್ರಚಳುವಳಿ

ಹರಿಹರ.ಜ.11: ರಾಜ್ಯದಲ್ಲಿ ಲಂಬಾಣಿ ಜನಾಂಗದ ಜನರು ಪ್ರತಿ ವರ್ಷ ಗುಳೆ ಹಾಗೂ ಸಾಮೂಹಿಕ ವಲಸೆ ಹೋಗುತ್ತಿದ್ದಾರೆ ಇದನ್ನು ತಡೆಗಟ್ಟಲು ತಾಲೂಕು ಸಮಾಜದ ವತಿಯಿಂದ ಪತ್ರ ಚಳುವಳಿ ನಡೆಸಿ ತಹಶೀಲ್ದಾರ್ ರೆಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಸಮಾಜದ ಗೌರವಾಧ್ಯಕ್ಷ ಬಿ.ಮೋತ್ಯನಾಯ್ಕ ದೇಶದಲ್ಲಿ ಸುಮಾರು ಆರೇಳು ಕೋಟಿಯಷ್ಠು ಲಂಬಾಣಿಗರು ಚದುರಿ ಜೀವಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮೂವತ್ತು ಲಕ್ಷದಷ್ಠು ಬಂಜಾರರು ಇರುವುದನ್ನು ಇತ್ತೀಚಿನ ಸಮಿಕ್ಷೇಗಳು ದೃಢಪಡಿಸಿವೆ. ಲಂಬಾಣಿಗರಂತೂ ಸ್ವತಂತ್ರ ನೆಲೆಯಿಲ್ಲದೆ ಬದುಕುತ್ತಿದ್ದಾರೆ. ಪ್ರತಿ ವರ್ಷ ಗುಳೆ ಹಾಗೂ ಸಾಮೂಹಿಕ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪತ್ರ ಚಳುವಳಿ ನಡೆಸುತ್ತಿದ್ದೇವೆ.ನಾವು ಬದುಕುತ್ತಿರುವ ತಾಂಡಗಳು ಇಂದಿಗೂ ಕಂದಾಯ ಗ್ರಾಮಗಳಾಗಿಲ್ಲ. ತಾಂಡಗಳ ಮನೆಯ ಹಕ್ಕು ಪತ್ರ ಸಿಕ್ಕಿಲ್ಲ. ರಸ್ತೆ, ಶುದ್ಧ ಕುಡಿಯುವ ನೀರು, ಆಸ್ಪತ್ರೆ, ಸುಸಜ್ಜಿತ ಶಾಲೆ, ಉಳುಮೆ ಯೋಗ್ಯ ಭೂಮಿ, ಕೌಶಲ್ಯ ಅಧಾರಿತ ಉದ್ಯೋಗಗಳು ಇವರಿಂದ ಮರೀಚಿಕೆ ಯಾಗಿವೆ. ಅಲ್ಲೊಂದು ಇಲ್ಲೊಂದು ಉದ್ಯೋಗ ಅವಕಾಶ ಬಿಟ್ಟರೆ ಬಹುಸಂಖ್ಯಾತ ಲಂಬಾಣಿ ಸಮುದಾಯ ಇಂದಿಗೂ ಅನಕ್ಷರತೆ ಮತ್ತು ನಿರುದ್ಯೋಗದ ಸವಾಲು ಎದುರಿಸುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಸಂಘದ ಅಧ್ಯಕ್ಷ ಕೃಷ್ಣನಾಯ್ಕ ಯಲವಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜನಾಯ್ಕ ಹೆಚ್, ಖಜಾಂಚಿ ಶಿವಾನಂದ್ ಚೌಹ್ಹಾಣ್, ಮಂಜ್ಯಾನಾಯಕ್, ಮುಖಂಡರಾದ ಬಿ.ಎಲ್. ಶಾಂತರಾಜ್, ಜಗದೀಶ್ ನಾಯ್ಕ ಕೋಮರನಹಳ್ಳಿ, ಎಲ್.ಪರಮೇಶ್ ನಾಯ್ಕ ಕೋಮರನಹಳ್ಳಿ, ಬಾಬು ರಾಠೋಡ್, ಅಣ್ಣಪ್ಪ ಸ್ವಾಮಿ, ಶಶಿನಾಯ್ಕ, ಹೆಚ್.ಎಲ್. ಮಾರುತಿ, ಹೆಚ್. ಕುಮಾರ್ ನಾಯ್ಕ, ರಮೇಶ್ ನಾಯ್ಕ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Comment