ಸಾಮಾನ್ಯ ರೆಸ್ಟೋರೆಂಟ್‍ನಲ್ಲಿ ಕೆನಡಾ ಪಿಎಂ

ಓಟುವಾ, ನ 14- ಇತ್ತೀಚೆಗೆ ಹಲವು ದೇಶದ ಪ್ರಧಾನಿಗಳ ಜನಸಾಮಾನ್ಯರ ಜೊತೆ ಬೆರೆತು ಗಮನ ಸೆಳೆಯುತ್ತಿದ್ದಾರೆ. ಅದರಂತೆ ಕೆನಡಾ ಪ್ರಧಾನಿ ಜಸ್ಟಿಸ್ ಟ್ರುಡೂ ಅವರ ಸಾಮಾನ್ಯ ರೆಸ್ಟೋರೆಂಟ್‍ಗೆ ಭೇಟಿ ನೀಡಿ ಕೋಳಿ ಖಾದ್ಯ ಖರೀದಿಸಿದ ದೃಶ್ಯವಳಿಗಳು ಸಕತ್ ವೈರಲ್ ಆಗಿದೆ.

ಕೆನಡಾ ದೇಶದ ಜಸ್ಟಿಸ್ ಟ್ರುಡೂ ಎರಡನೇ ಯುವ ಪ್ರಧಾನಿಯಾಗಿದ್ದಾರೆ. ಜಸ್ಟಿಸ್ ಟ್ರುಡೂ ಉತ್ತಮ ವ್ಯಕ್ತಿತ್ವ ಜನರಿಗೆ ಇಷ್ಟವಾಗಿದೆ. ಪ್ರಧಾನಿಯಾದರೂ ಸಾಮಾನ್ಯರಲ್ಲಿ ಒಬ್ಬರಾಗಿರುವ ಜಸ್ಟಿಸ್ ಟ್ರುಡೂ ವ್ಯಕ್ತಿತ್ವವನ್ನು ಫಿಲಿಫೈನ್ಸ್ ನಲ್ಲಿ ಕೂಡ ನೋಡಲು ಸಿಕ್ಕಿತು ಎಂದು ಪ್ರಜೆಗಳು ಹಾಡಿ ಹೊಗಳಿದ್ದಾರೆ.

ಹಸಿದಿದ್ದ ಜಸ್ಟಿಸ್ ಟ್ರುಡೂ ಸ್ಥಳೀಯ ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದಾರೆ. ಮೊದಲು ರಿಸೆಪ್ಶನ್‍ಗೆ ಹೋದ ಜಸ್ಟಿಸ್ ಫ್ರೈಡ್ ಚಿಕನ್ ಇದೆಯೇ ಎಂದು ಕೇಳಿದ್ದಾರೆ. ನಂತರ ಫ್ರೈಡ್ ಚಿಕನ್ ಹಾಗೂ ಸ್ಟ್ರಾಬೆರಿ ಪ್ಲೇಟ್ ಆರ್ಡರ್ ಮಾಡಿದ್ದಾರೆ. ನಂತರ ರೆಸ್ಟೋರೆಂಟ್‍ನಲ್ಲಿದ್ದ ಜನರನ್ನು ಸಹಜವಾಗಿ ಮಾತನಾಡಿಸಿದ್ದಾರೆ. ಕೆಲವರ ಕೈ ಕುಲುಕಿದ್ರೆ ಮತ್ತೆ ಕೆಲವರನ್ನು ಅಪ್ಪಿಕೊಂಡಿದ್ದಾರೆ. ಅಲ್ಲಿದ್ದ ಜನರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.

ಚಿಕನ್ ಸಿದ್ಧವಾಗ್ತಿದ್ದಂತೆ ಅದನ್ನು ಪ್ಯಾಕ್ ಮಾಡಿಸಿದ್ದು, ಕಾರಿನಲ್ಲಿ ತಿನ್ನೋದಾಗಿ ಹೇಳಿದ್ದಾರೆ. ರೆಸ್ಟೋರೆಂಟ್ ನಲ್ಲಿ ಜಸ್ಟಿಸ್ ಇದ್ದ ಫೆÇೀಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೊತೆಗೆ ರೆಸ್ಟೋರೆಂಟ್ ನಲ್ಲಿದ್ದ ಜನರು ಜಸ್ಟಿಸ್ ವ್ಯಕ್ತಿತ್ವವನ್ನು ಹಾಡಿ ಹೊಗಳಿದ್ದಾರೆ.

Leave a Comment