ಸಾಮಾಜಿಕ ಪ್ರಜ್ಞೆ ಬೆಳೆಸಿದ ಕಾಯಕಯೋಗಿ ಲಿಂ.ಶಿವಕುಮಾರ ಶ್ರೀ

ದಾವಣಗೆರೆ.ಸೆ.23; ಅಕ್ಷರ ಹಾಗೂ ಅನ್ನ ದಾಸೋಹದ ಮೂಲಕ ಸಾಮಾಜಿಕ ಪ್ರಜ್ಞೆ ಬೆಳೆಸಿದ ಕಾಯಕಯೋಗಿ ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಎಂದು ಎಂ.ಎಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ.ಡಾ.ಕೆ.ಟಿ ನಾಗರಾಜ ನಾಯ್ಕ್ ಹೇಳಿದರು.
ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ ಹಾಗೂ ತರಳಬಾಳು
ವೆಲ್‍ಫೇರ್ ಫೌಂಡೇಶನ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ತರಳಬಾಳು ಜಗದ್ಗುರು ಲಿ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 27 ನೇ ಶ್ರದ್ದಾಂಜಲಿ ಸಮಾರಂಭದ ಪ್ರಯುಕ್ತ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ನಾಡು ಕಂಡಂತಹ ಅಪರೂಪದ ವ್ಯಕ್ತಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ. ಅವರು ಅಕ್ಷರ ಹಾಗೂ ಅನ್ನ ದಾಸೋಹದ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿದ ಕಾಯಕ ಯೋಗಿ, ಭಕ್ತರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಭಕ್ತರ ಒಡನಾಟವೇ ಮಹಾಸುದಿನ ಎಂದು ಭಾವಿಸಿ ಸಮಾಜಕ್ಕಾಗಿ ದುಡಿದು ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ನಿತ್ಯ ಸಂಜೀವಿಯಾಗಿದ್ದರು ಎಂದರು.
ಹಿರಿಯ ಸಾಹಿತಿ ಎಸ್.ಟಿ ಶಾಂತಗಂಗಾಧರ್ ಮಾತನಾಡಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಜಾತಿ,ಧರ್ಮ ರಹಿತ ಸಮಾಜ ರೂಪಿಸಿದ  ದಿಟ್ಟತನದ ಗುರುಗಳಾಗಿದ್ದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಾಲೆಗಳನ್ನು ಆರಂಭಿಸಿದರು. ಸಮಾಜವನ್ನು ನಾವುಬೆಳೆಸಿದ್ದೇವೆ ಎಂದು ಎಲ್ಲಿಯೂ ಹೇಳಿಕೊಳ್ಳಲಿಲ್ಲ.ಜನರಲ್ಲಿ ಸಂಸ್ಕøತಿಯನ್ನು ಕಲಿಸುವಂತಹ ಕೆಲಸ ಮಾಡಿದವರು ಶ್ರೀಗಳು. ಜನರಲ್ಲಿ ಸಮಾಜಿಕ ಪ್ರಜ್ಞೆ ಬಿತ್ತುವ ಮೂಲಕ ವ್ಯಕ್ತಿಗಳನ್ನು ಬದಲಾವಣೆ ಮಾಡುತ್ತಿದ್ದರು.ಅವರಲ್ಲಿ ಆತ್ಮಸ್ಥೈರ್ಯ, ಆತ್ಮಬಲ ತುಂಬುವ ಮೂಲಕ ಪ್ರೇರಣೆ ನೀಡುತ್ತಿದ್ದರು. ಮಠ ಆರ್ಥಿಕವಾಗಿ ಹಿನ್ನಡೆಯಿಂದ ಇದ್ದರೂ ಕೂಡ ಅಂತಹ ಸಂದರ್ಭದಲ್ಲಿ ಜಗದ್ಗುರುಗಳು ಎಲ್ಲರನ್ನೂ ಬಡಿದೆಬ್ಬಿಸಿದರು.ಜನರ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತಿದ್ದರು.ಜನರಲ್ಲಿ ಮೌಲ್ಯಗಳನ್ನು ತುಂಬುವ ಜೊತೆಗೆ ದುಡಿಮೆಗೆ ಮುಂದಾಗುವಂತಹ ಪ್ರೇರಣೆ ನೀಡುತ್ತಿದ್ದರೆಂದರು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಸಾಲಿಗ್ರಾಮ ಗಣೇಶ್ ಶೆಣೈ, ಎಸ್.ಎಂ ಮಲ್ಲಮ್ಮ, ರಾಘವೇಂದ್ರ ನಾಯರಿ ಇದ್ದರು.

Leave a Comment