ಸಾಮಾಜಿಕ ನ್ಯಾಯಕ್ಕಾಗಿ ಬಂಜಾರ ಸಮುದಾಯ ಒಗ್ಗಟ್ಟಾಗಬೇಕು

ದಾವಣಗೆರೆ.ಫೆ.13; ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಂಜಾರ ಸಮುದಾಯ ಒಂದಾಗಬೇಕು ಎಂದು ಚಿತ್ರದುರ್ಗದ ಬಂಜಾರ ಪೀಠದ ಸರ್ದಾರ ಶ್ರೀ ಶ್ರೀಧರ ಸೇವಾಲಾಲ್ ಸ್ವಾಮೀಜಿ ಆಶಿಸಿದರು.
ಅವರು, ನಾಳೆ ಮತ್ತು ಫೆ.16 ರಂದು ಸೂರಗೊಂಡ ಕೊಪ್ಪದಲ್ಲಿ ನಡೆಯಲಿರುವ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಬಂಜಾರ ಸಮುದಾಯದ ಮಾಲಾಧಾರಿಗಳ ಪಾದಯಾತ್ರೆ ಸಮಿತಿ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಂಜಾರ ಸಮುದಾಯ ತಾಂಡಾಗಳಿಗೆ ಮಾತ್ರ ಸೀಮಿತವಾಗಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬೆಳೆಯಬೇಕಾಗಿದೆ. ನಮ್ಮ ಸಮುದಾಯದ ಏಕೈಕ ಪವಿತ್ರ ಕ್ಷೇತ್ರ ಸಂತ ಸೇವಾಲಾಲ್ ಜನ್ಮಸ್ಥಳ ಅದು ನಮ್ಮ ಜಿಲ್ಲೆಯ ಸೂರಗೊಂಡನಕೊಪ್ಪ. ಈ ಸ್ಥಳದಲ್ಲಿ ಎಲ್ಲರೂ ನಮ್ಮ ಧರ್ಮಗುರುಗಳನ್ನು ಆರಾಧಿಸಿ ಅವರ ಕೃಪೆಗೆ ಪಾತ್ರರಾಗಬೇಕು. ಆದ್ದರಿಂದ ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಬದುಕಬೇಕು ಎಂದು ಹೇಳಿದರು.
ಕೆ.ಎಂ. ಸಿದ್ಧಲಿಂಗಸ್ವಾಮಿ ಮಾತನಾಡಿ, ಮಠ-ಮಾನ್ಯಗಳಿಂದ ಮಠಾಧೀಶರಿಂದ ಸಮಾಜ ಬೆಳೆಯುತ್ತೆ. ಮಠಗಳನ್ನು ಬೆಳೆಸಿದರೆ ಸಮುದಾಯದವು ಬೆಳೆಯುತ್ತದೆ. ಆದ್ದರಿಂದ ಬಂಜಾರ ಮಠವು ಬೆಳೆಯಲಿ, ಸರ್ದಾರ ಶ್ರೀಧರ ಸೇವಲಾಲ್ ಸ್ವಾಮೀಜಿಗಳು ಕೂಡ ಕ್ರೀಡಪಟುಗಳು ಆಗಿದ್ದು, ತಮ್ಮ ಕಲೆಯ ಜೊತೆಗೆ ಸಮುದಾಯವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಲಿ ಎಂದು ಹಾರೈಸಿ, ಸರ್ದಾರ ಶ್ರೀಧರ ಸೇವಾಲಾಲ್ ಸ್ವಾಮೀಜಿಯವರಿಗೆ ಆಂಜನೇಯನ ಮುಖವುಳ್ಳ ಬೆತ್ತವನ್ನು ಕಾಣಿಕೆಯಾಗಿ ನೀಡಿದರು. ಬಂಜಾರ ಸಮುದಾಯದ ಯುವ ಮುಖಂಡ ಗೆಳ್ಯಾನಾಯ್ಕ ಮಾತನಾಡಿದರು. ಕಾರ್ಯಕ್ರಮವನ್ನು ಪತ್ರಕರ್ತ ಎ.ಫಕೃದ್ಧೀನ್ ಸ್ವಾಗತಿಸಿ, ನಿರೂಪಿಸಿದರು. ವಂದನೆಯನ್ನು ಕೆ.ಸಿ. ಮಂಜುನಾಥ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಂಜಾರ್ ಧರ್ಮ ಪ್ರಚಾರಕರಾದ ಬೇವಿನಹಳ್ಳಿ ಹನುಮಂತನಾಯ್ಕ, ಶಾಂತಿ ನಗರದ ಭೋಜನಾಯ್ಕ, ನಾಗೂಬಾಬು, ಬಾಡಿಬಿಲ್ಡರ್ ಕೃಷ್ಣನಾಯ್ಕ, ಜಗದೀಶ್‍ನಾಯ್ಕ ಉಪಸ್ಥಿತರಿದ್ದರು.

Leave a Comment