ಸಾಮಾಜಿಕ ನಾಟಕ ಪ್ರದರ್ಶನ : ಪತ್ರಕರ್ತರ ಕಲಾ ಪ್ರತಿಭೆ ನಿದರ್ಶನ

* ಕಿಕ್ಕಿರಿದು ತುಂಬಿದ ರಂಗಮಂದಿರ
ರಾಯಚೂರು.ಡಿ.01- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಿಪೋರ್ಟಱ್ಸ್ ಗಿಲ್ಡ್ ಹಾಗೂ ವಾರ್ತಾ ಇಲಾಖೆ ಸಹಯೋಗದೊಂದಿಗೆ ನಡೆದ ಅಣ್ಣತಂಗಿ ಸಾಮಾಜಿಕ ನಾಟಕ ಅತ್ಯಂತ ಯಶಸ್ವಿ ಕಂಡಿತು.
ಸುದ್ದಿ ಸಮಾಚಾರದ ಒತ್ತಡದಲ್ಲಿ ಪ್ರತಿನಿತ್ಯ ಓಡಾಡುವ ಪತ್ರಕರ್ತರು ರಾಷ್ಟ್ರೀಯ ಪತ್ರಕರ್ತರ ದಿನಾಚರಣೆ ಮತ್ತು ರಾಜ್ಯೋತ್ಸವ ಅಂಗವಾಗಿ ನಾಟಕ ಪ್ರದರ್ಶನದ ತಿಂಗಳು ಪ್ರಯತ್ನಕ್ಕೆ ನಿನ್ನೆ ದೊರೆತ ಜನ ಬೆಂಬಲ ನಿಜಕ್ಕೂ ಅಚ್ಚರಿಯಾಗಿತ್ತು. ರಂಗಮಂದಿರ ಕಿಕ್ಕಿರಿದು ತುಂಬಿ, ಪತ್ರಕರ್ತರ ಪ್ರದರ್ಶನ ಕಾರ್ಯಕ್ಕೆ ಅಭೂತಪೂರ್ವ ಸ್ಪಂದನೆ ನೀಡುವ ಮೂಲಕ ಜನರು ಕಲಾವಿದರಾದ ಪತ್ರಕರ್ತರ ಬೆನ್ನು ತಟ್ಟಿದರು.
ಅಣ್ಣತಂಗಿ ನಾಟಕ ಅನೇಕ ಸಾಮಾಜಿಕ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಅದ್ಭುತ ಕಥೆಯನ್ನು ಹೊಂದಿದ ನಾಟಕ ಎನ್ನುವ ಕಾರಣಕ್ಕೆ ಪತ್ರಕರ್ತರು ಇದನ್ನು ಆಯ್ಕೆ ಮಾಡಿಕೊಂಡು ಕಳೆದ ಒಂದು ತಿಂಗಳಿಂದ ನಿರಂತರ ಅಭ್ಯಾಸದ ಮೂಲಕ ಯಶಸ್ವಿ ಪ್ರದರ್ಶನವನ್ನು ನೀಡಿದ್ದಾರೆ. ವೃತ್ತಿ ಕಲಾವಿದರ ರೀತಿಯಲ್ಲಿ ನಿನ್ನೆಯ ನಾಟಕದಲ್ಲಿ ಎಲ್ಲಾ ಪಾತ್ರಧಾರಿಗಳು ತಮ್ಮ ಕಲಾ ಪ್ರತಿಭೆ ಪ್ರದರ್ಶಿಸುವ ಮೂಲಕ ಜನರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಟಕ ಪ್ರದರ್ಶನ ಬಗ್ಗೆ ಅನೇಕ ಆತಂಕದೊಂದಿಗೆ ಆರಂಭಗೊಂಡು ನಾಟಕ ಅಭ್ಯಾಸ ನಿನ್ನೆ ವೇದಿಕೆಯಲ್ಲಿ ಪ್ರದರ್ಶನದೊಂದಿಗೆ ತಮ್ಮೊಳಗಿರುವ ಕಲಾವಿದನನ್ನು ಜನರಿಗೆ ಪರಿಚಯಿಸಿದರು. ಪತ್ರಕರ್ತರ ನಟನೆಗೆ ಜನರಿಂದ ಮುಕ್ತ ಪ್ರಶಂಸೆಗಳು ವ್ಯಕ್ತಗೊಂಡಿವು. ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಿಪೋರ್ಟಱ್ಸ್ ಗಿಲ್ಡ್‌ನ ಸಂಘಟಿತ ಪ್ರಯತ್ನ ನಿನ್ನೆಯ ನಾಟಕದ ಯಶಸ್ವಿ ಹಿಂದಿನ ಪ್ರಮುಖ ಶಕ್ತಿಯಾಗಿತ್ತು.
ನಟನೆಯಲ್ಲಿ ಬೆರಳಣಿಕೆಯ ಪತ್ರಕರ್ತರಿದ್ದರೂ, ತೆರೆಯ ಹಿಂದೆ ಎಲ್ಲಾ ಪತ್ರಕರ್ತರು ನಾಟಕ ಯಶಸ್ವಿಗೆ ಸಮರ್ಪಿಸಿಕೊಳ್ಳುವ ಮೂಲಕ ಪ್ರಪ್ರಥಮ ಪ್ರಯತ್ನ ಅತ್ಯಂತ ಅಭೂತಪೂರ್ವ ಯಶಸ್ವಿಗೆ ಕಾರಣವಾಯಿತು. ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಹಾಗೂ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ನಾರಾಯಣಪೇಟೆ ಶಾಸಕರಾದ ಎಸ್.ಆರ್. ರೆಡ್ಡಿ ಅವರು ಪೂರ್ಣ ನಾಟಕ ವೀಕ್ಷಿಸಿ, ಪ್ರತಿ ಸಮಾವೇಶಕ್ಕೂ ತಮ್ಮ ಪ್ರತಿಕ್ರಿಯೆ ನೀಡಿದರು.
ಸುಮಾರು ಐದುವರೆ ಗಂಟೆಗಳ ಕಾಲ ನಾಟಕ ಪ್ರದರ್ಶನ ನಿರಂತರ ನಡೆಯಿತು. ಮಧ್ಯ ರಾತ್ರಿವರೆಗೂ ನಾಟಕ ವೀಕ್ಷಿಸುವ ಮೂಲಕ ಪತ್ರಕರ್ತರ ಅಂಬೆಗಾಲು ನಡೆಯ ಪ್ರಯತ್ನಕ್ಕೆ ಜನ ಬೆಂಬಲ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದ್ದಾರೆ. ವರ್ಷಪೂರ್ತಿ ವೃತ್ತಿಯಲ್ಲಿರುವ ಪತ್ರಕರ್ತರು ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಜನ ಬಾಂಧವ್ಯದ ಹೊಸ ಪ್ರಯತ್ನಕ್ಕೆ ಅಣ್ಣತಂಗಿ ನಾಟಕ ಪ್ರದರ್ಶನ ವೇದಿಕೆಯಾಗಿತ್ತು.

Leave a Comment