ಸಾಮಾಜಿಕ ಕಾರ್ಯಕರ್ತ ವರದಿಗಾರ ಬೆಂಬಲಿಗರಿಂದ ವಿಮ್ಸ್ ಸಿಬ್ಬಂದಿ ಮೇಲೆ ಹಲ್ಲೆ: ಆರೋಪ

ಬಳ್ಳಾರಿ, ಜೂ.14: ನಗರದ ವಿಮ್ಸ್ ಆಸ್ಪತ್ರೆಯ ಹಿರಿಯ ಲ್ಯಾಬ್ ಟಿಕ್ನೀಷಿಯನ್ ವಿ.ಕೆ.ಯಾದವಾಡ ಅವರ ಮೇಲೆ ಮೊನ್ನೆ ರಾತ್ರಿ ಕೆಲವರು ಹಲ್ಲೆ ಮಾಡಿದ್ದು. ಗಾಯಗೊಂಡಿರುವ ಅವರು ವಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಹಲ್ಲೆಯನ್ನು ಸಾಮಾಜಿಕ ಕಾರ್ಯಕರ್ತ, ಖಾಸಗಿ ಟಿವಿ ಚಾನಲ್ ಸಂಪಾದಕರು ಮತ್ತು ಬಳ್ಳಾರಿಯ ವರದಿದಾರರ ಬೆಂಬಲಿಗರು ನಡೆಸಿದ್ದಾರೆಂದು ನಗರದ ಕೌಲ್ ಬಜಾರ್ ಠಾಣೆಯಲ್ಲಿ ನಿನ್ನೆ ಸಂಜೆ ಕೇಸು ದಾಖಲಾಗಿದೆ. ಈ ಹಲ್ಲೆಗೆ ಸಂಬಂಧಿಸಿದ ವಿಡಿಯೋ ಚಿತ್ರಣವನ್ನು ಹಲ್ಲೆಗೊಳಗಾದ ವ್ಯಕ್ತಿ ಪೊಲೀಸರಿಗೆ ನೀಡಿದ್ದಾರೆಂದು ತಿಳಿದು ಬಂದಿದೆ.

Leave a Comment