ಸಾಮಾಜಿಕ ಕಳಕಳಿಯ ಧ್ವನಿ ವರದಕ್ಷಿಣೆಯ ಪಿಡುಗು,ಜಾಗೃತಿಯ ಪ್ರಯತ್ನ

ವರದಕ್ಷಿಣೆಯ ನೆಪ ಮಾಡಿಕೊಂಡು ಅಮಾಯಕ ಮಂದಿಯನ್ನು ಜೈಲಿಗೆ ಹಾಕುವ ಪ್ರಕರಣಗಳು ಆಗಾಗ ನಡೆಯುತ್ತವೆ. ಇಂತಹುದೇ ವಿಷಯವನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದುವೇ ’ಧ್ವನಿ’

ಮಾರ್ಡನ್ ಹುಡುಗಿ ಮತ್ತು ಸಂಪ್ರದಾಯಸ್ಥ ಕುಟುಂಬದ ಹುಡುಗನ ಪ್ರೀತಿ ಪ್ರೇಮ,ಆ ನಂತರ ಘಟನೆಗಳೇ ಚಿತ್ರದ ಧ್ವನಿ. ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಜನಮೆಚ್ಚುಗೆ ಪಡೆದಿದೆ.

ರಾಜ್ಯದಲ್ಲಿ ನಡೆದ ನೈಜ ಘಟನೆಯನ್ನು ಕಥಾವಸ್ತುವಾಗಿರಿಸಿಕೊಂಡು ಸಾಮಾಜಿಕ ಕಳಕಳಿಯೊಂದಿಗೆ ಸಿನಿಮಾ ಮಾಡಲಾಗಿದೆ. ಇತ್ತೀಚೆಗೆ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೀತ್ಸವದಲ್ಲಿಯೂ ಪ್ರದರ್ಶನ ಕಂಡು ಸಿನಿಮಾಸಕ್ತರಿಂದ ಬಾರೀ ಜನ ಮೆಚ್ಚುಗೆಯನ್ನೂ ಪಡೆದುಕೊಂಡಿದೆ.
ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಹುಡುಗ ಮತ್ತು ಮಾರ್ಡನ್ ಹುಡುಗಿ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ. ಮದುವೆಯದ ನಂತರ ಹುಡುಗಿಗೆ ಅತ್ತೆ ಮಾವ ಮಾರ್ಡನ್ ಆಗಿರಲು ಬಿಡುವುದಿಲ್ಲ. ಜೊತೆಗೆ ಆಕೆ ಸ್ವಂತ ಕಾಲ ಮೇಲೆ ನಿಲ್ಲುವ ಆಸೆಗೆ ಪೂರಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಗಂಡನ ಮನೆಯವರ ವಿರುದ್ದ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ. ಅದಕ್ಕಾಗಿ ಆಕೆಗೆ ಸಿಗುವುದುದೇ ವರದಕ್ಷಿಣೆಯ ನೆಪ. ಇದರಿಂದಾಗಿ ಗಂಡನ ಕುಟುಂಬದ ಮಂದಿ ಹೈರಾಣವಾಗಿ ಹೋಗುತ್ತಾರೆ. ಅಲ್ಲದೆ ಆತ್ಮಹತ್ಯೆಯಂತಹ ದಾರಿಯನ್ನೂ ಹಿಡಿಯುತ್ತಾರೆ. ಏನೂ ತಪ್ಪು ಮಾಡದ ಮಂದಿ ವಿನಾಕಾರಣ ವರದಕ್ಷಿಣೆಯ ಪಿಡುಗಿಗೆ ಬಲಿಯಾಗಿ ದುರಂತ ಅಂತ್ಯ ಕಾಣುವ ಕಥೆಯೇ ಧ್ವನಿಯ ತಿರುಳು.
ಪಂಗನಾಮ, ಬದ್ಮಾಶ್ ಹಾಗು ಡೀಲ್‌ರಾಜ ಚಿತ್ರದ ಬಳಿಕ ನಟಿ ಇತಿ ಆಚಾರ್ಯ ಮತ್ತೊಂದು ಸಾಮಾಜಿಕ ಕಳಕಳಿಯ ಸಿನಿಮಾದಲ್ಲಿ ನಟಿಸಿದ್ದಾರೆ. ಅದುವೇ ಧ್ವನಿ. ವರದಕ್ಷಿಣೆ ಪಿಡುಗಿನಿಂದ ಯಾವುದೇ ಅಮಾಯಕ ಮಂದಿ ಬಲಿಯಾಗಬಾರದು ಎನ್ನುವ ಸಂದೇಶ ಚಿತ್ರದಲ್ಲಿದೆ. ರಾಜ್ಯದಲ್ಲಿ ನಡೆದ ನೈಜ ಘಟನೆಯನ್ನು ಆಧಿರಿಸಿ ಚಿತ್ರ ಮಾಡಲಾಗಿದೆ.
ವರದಕ್ಷಿಣೆಯಿಂದ ಅಮಾಯಕರು ತೊಂದರೆಗೆ ಒಳಗಾಗಬಾರದು. ಅವರಿಗೆ ಅನ್ಯಾಯವೂ ಆಗಬಾರದು ಎನ್ನುವ ಕಳಕಳಿ ಚಿತ್ರತಂಡದ್ದು, ಚಿತ್ರದಲ್ಲಿ ಉತ್ತಮವಾದ ಪಾತ್ರ ಸಿಕ್ಕಿದೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ನೆಲೆ ನಿಲ್ಲುವ ಆಸೆ ಇದೆ. ಚಿತ್ರದ ಬಗ್ಗೆ ಅನೇಕ ಮಂದಿ ಮೆಚ್ಚುಗೆಯ ಮಾತನಾಡಿದ್ದಾರೆ. ಇದು ಸಹಜವಾಗಿ ಗೆಲವಿನ ಆಸೆ ಹೆಚ್ಚಿಸಿದೆ.
ಮುಂದಿನ ತಿಂಗಳು ಚಿತ್ರ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ.ಇದರ ಜೊತೆಗೆ ಇನ್ನೂ ಮೂರು ನಾಲ್ಕು ಚಿತ್ರಗಳಿಂದ ಅವಕಾಶ ಬಂದಿದ್ದು ಕಥೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯದಲ್ಲಿಯೇ ಉತ್ತಮ ಪಾತ್ರಗಳಿಗೆ ಒತ್ತು ನೀಡುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅದರಲ್ಲಿಯೂ ಸಾಮಾಜಿಕ ಕಳಕಳಿಯ ಸಿನಿಮಾಗಳಲ್ಲಿ ನಟಿಸುವ ಕಡೆಗೆ ಗಮನ ಹರಿಸುವ ಒಲವಿದೆ ಎನ್ನುತ್ತಾರೆ ಇತಿ.

Leave a Comment