ಸಾಮರ್ಥ್ಯ ವೃದ್ಧಿಗೆ ರಫೇಲ್ ವಿಮಾನ ಅಗತ್ಯತೆ ಪ್ರತಿಪಾದನೆ

ನವದೆಹಲಿ, ಸೆ. ೧೨- ಭಾರತೀಯ ವಾಯುಪಡೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ರಾಫೆಲ್ ಯುದ್ಧ ವಿಮಾನಗಳ ಖರೀದಿ ಅಗತ್ಯತೆ ಇದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ದನೋವಾ ಹೇಳಿದ್ದಾರೆ.
ರಾಫೆಲ್ ಯುದ್ಧ ವಿಮಾನ ಖರೀದಿ ವಿಷಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾದ- ವಿವಾದಗಳ ಮಧ್ಯೆದಲ್ಲಿಯೇ ವಾಯುಪಡೆ ಮುಖ್ಯಸ್ಥರು ರಾಫೆಲ್ ಖರೀದಿ ವಿಷಯದಲ್ಲಿ ಸರ್ಕಾರದ ನಡೆಯನ್ನು ಸಮರ್ಥಿಸಿದ್ದಾರೆ.
ನೆರೆಯ ರಾಷ್ಟ್ರಗಳು ತಮ್ಮ ಸೇನೆ ಸಾಮರ್ಥ್ಯವನ್ನು ಬಲಿಷ್ಠಗೊಳಿಸುವ ಯತ್ನದಲ್ಲಿರುವುದರಿಂದ ಯಾವುದೇ ರಾಷ್ಟ್ರಕ್ಕಿಂತ ಭಾರತ ಹೆಚ್ಚಿನ ರಕ್ಷಣಾ ಸವಾಲು ಎದುರಿಸುತ್ತಿದೆ. ಹೀಗಾಗಿ ಭಾರತೀಯ ವಾಯುಪಡೆಯ ದಾಳಿ ಸಾಮರ್ಥ್ಯವನ್ನು ಬಲಿಷ್ಠಗೊಳಿಸಲು ರಾಫೆಲ್ ಯುದ್ಧ ವಿಮಾನಗಳ ಖರೀದಿ ಅತ್ಯಗತ್ಯವಿದೆ. ಅವುಗಳ ಖರೀದಿಗೆ ಮುಂದಾಗಿರುವ ಸರ್ಕಾರದ ಕ್ರಮ ಮೆಚ್ಚುವಂತದ್ದು ಎನ್ನುವ ಮೂಲಕ ಸರ್ಕಾರದ ಕ್ರಮವನ್ನು ಬೆಂಬಲಿಸಿಲ್ಲ.
ರಾಫೆಲ್ ವ್ಯವಹಾರವನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಸಮವಸ್ತ್ರದಲ್ಲಿರುವವರನ್ನು ಬಳಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳನ್ನು ಸರ್ಕಾರವನ್ನು ಟೀಕಿಸುತ್ತಿರುವ ಹಿನ್ನೆಲೆಯಲ್ಲಿಯೂ ವಾಯುಪಡೆ ಮುಖ್ಯಸ್ಥರ ಹೇಳಿಕೆ ಸಕಾಲಿಕವಾಗಿ ಮಹತ್ವವನ್ನು ಪಡೆದಿದೆ.

Leave a Comment