ಸಾಮರಸ್ಯದ ಸಂಕೇತ ಮೊಹರಂ ಹಬ್ಬ

ಸಿರವಾರ.ಸೆ.11- ಹಿಂದೂ ಮುಸ್ಲಿಂಮರ ನಡುವೆ ಬಾಂಧವ್ಯ ಬೆಸೆಯುವ ಬೆರೆಳೆಣಿಕೆ ಹಬ್ಬಗಳಲ್ಲಿ ಮೊಹರಂ ಆಚರಣೆ ಪ್ರಮುಖವಾದದ್ದು, ತಾಲೂಕಿನಾದ್ಯಂತ ಗಣೇಶನ ಹಬ್ಬ ಮುಗಿಯುತ್ತಿದ್ದಂತೆ ಮೊಹರಂ ಹಬ್ಬ ಆಚರಣೆ ಕಳೆಗಟ್ಟಿತ್ತು.
ಮುಸ್ಲಿಂಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆಗೆ ಅಲೆ ದೇವರನ್ನು ಪ್ರತಿಷ್ಠಾಪಿಸಿ, 5 ದಿನ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ನಿನ್ನೆ ಮೊಹರಂ ಹಬ್ಬದ ದಫನ್ ಅಂಗವಾಗಿ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಮೊಹರಂ ಹಬ್ಬದ ದಫನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಂತಿ, ಸುವ್ಯವಸ್ಥೆಯಿಂದ ಹಬ್ಬ ಆಚರಿಸಿದರು.
ಕೆಲ ಭಕ್ತರು ಹುಲಿ ವೇಷ ಧರಿಸಿ, ಗ್ರಾಮದಾದ್ಯಂತ ಹುಲಿನೃತ್ಯ ಮಾಡುವುದು ಹಬ್ಬದ ವಿಶೇಷವಾಗಿತ್ತು. ಮೊಹರಂ ಹಬ್ಬದ ಕೊನೆ ದಿನಕ್ಕೆ ಮುನ್ನ ರಾತ್ರಿ ಅಗ್ನಿಕುಂಡದಲ್ಲಿ ನಡೆಯುವ ಮೂಲಕ ಭಕ್ತಾಧಿಗಳ ಅನೇಕ ಸಮಸ್ಯೆಗಳಿಗೆ ಪರಿಹಾರವಾಗುತ್ತೆಂಬ ನಂಬಿಕೆಗೆ ಮನೆ ಮಾಡಿತ್ತು. ಪಟ್ಟಣ ಸಮೀಪದ ತಿಪ್ಪಲದಿನ್ನಿ ಗ್ರಾಮದಲ್ಲಿ ನಿನ್ನೆ ಸಂಜೆ ಮೊಹರಂ ಹಬ್ಬದ ಆಚರಣೆಯನ್ನು ಹಿಂದೂ-ಮುಸ್ಲಿಂ ಎರಡು ಧರ್ಮದವರು ಸಂಭ್ರಮದಿಂದ ಆಚರಿಸಿದರು. ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಇಂತಹ ಹಬ್ಬಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅವಶ್ಯಕವಾಗಿದೆ.

Leave a Comment