ಸಾಧನೆಯ ಹೆಬ್ಬಯಕೆ ಹೊತ್ತ ಕಲಾವಿದ ರಾಘು

  • ರಾಘವೇಂದ್ರ ವಿ ಈಳಿಗೆರ್, ಕಿರುಚಿತ್ರ ಕಲಾವಿದ

ಸದ್ಯ ಎಲ್ಲಾ ಚಿತ್ರರಂಗದಲ್ಲಿ ಕಿರುಚಿತ್ರಗಳ ಭರಾಟೆ ಜೋರಾಗಿಯೇ ನಡೆದಿದೆ. ಇತ್ತೀಚೆಗೆ ಈ ಕಿರುಚಿತ್ರಗಳಿಗೆ ಯುವ ಕಲಾವಿದರು ಮಾರು ಹೋಗಿದ್ದು, ಯಾವುದೇ ನಿರ್ಮಾಪಕರಿಲ್ಲದೆ, ಸ್ಟಾರ್ ನಿರ್ದೆಶಕರ ಸಹಾಯವಿಲ್ಲದೆ, ಕೇವಲ ಸ್ನೇಹಿತರ ಬೆಂಬಲದಲ್ಲಿ ಅತ್ಯುತ್ತಮ ಕಿರುಚಿತ್ರಗಳನ್ನು ನಿರ್ಮಿಸಿ ಗಮನ ಸೆಳೆಯುತ್ತಿದ್ದಾರೆ. ಅಂತಹ ಸಾಲಿನಲ್ಲಿ ರಾಘವೇಂದ್ರ ವಿ. ಈಳಿಗೆರ್ ಕೂಡ ಸೇರ್ಪಡೆಯಾಗಿದ್ದಾರೆ.

vaividya-raghuಹಾಲಿವುಡ್‌ನಲ್ಲಿ ಸಿದ್ದವಾಗಿರುವ ಸ್ಕ್ರಿಪ್ಟ್ ನ್ನೇ ಚಿತ್ರವಾಗಿ ತೆಗೆಯುತ್ತಾರೆ, ನಮ್ಮಲ್ಲಿ ಆಗಿಲ್ಲ, ಸ್ಪಾಟ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಚಿತ್ರ ನಿರ್ಮಿಸುತ್ತಾರೆ. ಹಾಗಾಗಿ ಚಿತ್ರ ತಯಾರಿಯಲ್ಲಿ ಭಿನ್ನವಾಗಿರುತ್ತದೆ. ಇನ್ನು ನಮ್ಮ ಕನ್ನಡ ಪ್ರೇಕ್ಷಕರು ಬಹಳ ಬುದ್ದಿವಂತರಾಗಿದ್ದು,  ಸಾಧ್ಯವಾದಷ್ಟು ಹೊಸತನ, ಬದಲಾವಣೆಯನ್ನು ಇಚ್ಚಿಸುತ್ತಾರೆ. ವಿಭಿನ್ನ ಸದಾಭಿರುಚಿಯ ಚಿತ್ರಗಳಿಗೆ ಒಳ್ಳೆ ಸಮಯ ಇದು.

ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಕಿರುಚಿತ್ರಗಳ ಬಗ್ಗೆ ತಡಕಾಡಿದವರಿಗೆ ಇವರ ಕಿರುಚಿತ್ರಗಳು ಕಾಣಸಿಗುವುದು ವಿಶೇಷ. ಅದರಲ್ಲೂ ಭಾರತೀಯ ಜಾತಿ ವ್ಯವಸ್ಥೆ, ನಿರ್ದಿಷ್ಟ ಗುರಿ ತಲುಪಲು ಜನರು ಪಡುವ ಕಷ್ಟ ಸೇರಿದಂತೆ ಅನೇಕ ಕಿರುಚಿತ್ರಗಳನ್ನು ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿ ಚಂದನವನದಲ್ಲಿ ಭರವಸೆ ಮೂಡಿಸಿದ್ದಾರೆ.

ಮನಶಾಸ್ತ್ರ ವಿದ್ಯಾರ್ಥಿಯಾದ ರಾಘವೇಂದ್ರ ಮನೆಯವರನ್ನು ಎದುರಿಸಿ ಚಿತ್ರರಂಗದಲ್ಲಿ ಏನಾದರೂ ಹೊಸತನ ತಂದು ಸಾಧಿಸಬೇಕೆಂಬ ಹೆಬ್ಬಯಕೆ. ಅದಕ್ಕಾಗಿ ಮಾಡಿರುವ ಕಸರತ್ತು ನಿಜಕ್ಕೂ ಶ್ಲಾಘನೀಯ. ಕಳೆದ ೫ ವರ್ಷದಿಂದ ಕಿರುಚಿತ್ರದಲ್ಲಿ ತೊಡಗಿಸಿಕೊಂಡಿರುವ ರಾಘವೇಂದ್ರ ಅವರ ಕೆಲಸಕ್ಕೆ ಅನೇಕ ನಿರ್ದೇಶಕರು ಭೇಷ್ ಎಂದಿದ್ದಾರೆ.

vaividya-raghu2ಇವರ ಆಲೋಚನೆಗಳು, ಹಾಗೂ ಚಿತ್ರ ನಿರ್ಮಿಸುವ ರೀತಿ ಜನರನ್ನು ಬಹುವಾಗಿ ಆಕರ್ಷಿಸಿವೆ ಎಂದರೆ ತಪ್ಪಾಗಲಾರದು. ಆನೇಕಲ್ ಮೂಲದ ರಾಘವೇಂದ್ರ ಅವರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಂತೆ ಸಾಕಷ್ಟು ಯೋಜನೆಗಳು ಇವೆ. ಆದರೆ ಅದಕ್ಕೆ ತಕ್ಕಂತೆ ನಿರ್ಮಾಪಕರು ಸಿಗುತ್ತಿಲ್ಲ ಎಂಬುದು ಬೇಸರ ಸಂಗತಿ.ಬಹಳ ದಿನ ಕಷ್ಟಪಟ್ಟು ಒಂದು ಒಳ್ಳೆ ಕಥೆ ಸಿದ್ದ ಮಾಡಿ, ನಿರ್ಮಾಪಕರ ಬಳಿ ಹೋದರೆ, ಅವರು ಇಷ್ಟಬಂದಂತೆ ಒತ್ತಡ ಹೇರುತ್ತಾರೆ, ಚಿತ್ರ ನಿರ್ಮಿಸುವಾಗ ಸ್ವಾತಂತ್ರ ಇರುವುದಿಲ್ಲ, ಯಾರ ಸಹಾಯವಿಲ್ಲದೇ ಬೆಳಯಬೇಕೆಂದರೆ ಎಲ್ಲಾ ಕಹಿ ಅನುಭವಗಳನ್ನು ಅನುಭವಿಸಲೇ ಬೇಕು ಎಂದು ನೋವಿನಿಂದಲೇ ಹೇಳುತ್ತಾರೆ ರಾಘವೇಂದ್ರ, ಆದರೆ ಸ್ನೇಹಿತರಾದ ಮನೋಜ್ , ಸುಶ್ಮಿತ್, ಜಾನ್ ಅವರ ನೆರವು, ಸಹಕಾರ ಎಂದಿಗೂ ಮರೆಯುವುದಿಲ್ಲ ಎಂದು ಹೇಳುತ್ತಾರೆ.

ಶ್ರದ್ದಾಂಜಲಿ ಸದ್ಯ ವೆಡ್ಡಿಂಗ್ ಪ್ಲಾನ್ ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಎಲ್ಲೆಡೆ ಟ್ರೆಂಡ್ ಆಗುತ್ತಿದೆ, ಹಾಗೂ ಅದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಅದರಂತೆ ಶ್ರದ್ದಾಂಜಲಿ ಎಂಬ ಚಿತ್ರ ನಿರ್ಮಿಸಿ,ನಮ್ಮ ಅಂತ್ಯಕ್ರಿಯೆ ಬಗ್ಗೆ ಯೋಜನೆ ಹಾಕಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮೊದಲೇ ನಿರ್ಧರಿಸುವುದರ ಕುರಿತು ಕಥೆ ಹೆಣೆಯಲಾಗಿದೆ. ಅದಕ್ಕಾಗಿ ಒಳ್ಳೆ ನಿರ್ಮಾಪಕರ ಹುಡುಕಾಟದಲ್ಲಿದ್ದೇನೆ.

ಈಗಾಗಲೇ ಒಂದು ಚಿತ್ರಕ್ಕೆ ಹೇಗೆ ಕ್ಯಾಮರ ಕೆಲಸ ಮಾಡಬೇಕೆಂದು ತಯಾರಿ ನಡೆಸಿರುವ ರಾಘವೇಂದ್ರ ಅವರು ಕೆಜಿಎಫ್‌ನಲ್ಲಿ ಬಳಸಿರುವ ದುಬಾರಿ ಕ್ಯಾಮರವನ್ನು ಬಾಡಿಗೆ ಪಡೆದು ಕೆಲಸ ಕಲಿತಿದ್ದಾರೆ.  ಇನ್ನು ಇವರು ಐಡೆಂಟಿಟೆ, ಟೈಮ್ ಆಯ್ತಿ, ನಮಃ, ಪಾಥ್  ಟು ಡೆಸ್ಟಿನಿ ಸೇರಿದಂತೆ ಹಲವಾರು ಕಿರುಚಿತ್ರ ನಿರ್ಮಾಣ ಸೈ ಎನಿಸಿಕೊಂಡು, ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ನಾವು ವಿದ್ಯೆ ಕಲಿಯುವಾಗ ಮಾಡುವ ತಪ್ಪುಗಳಿಂದಲೇ ಒಳ್ಳೆ ವಿದ್ಯೆ ಕಲಿಯಲು ಸಾಧ್ಯ, ಹಾಗಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಕಲಿಯುವ ಹಂಬಲದಲ್ಲಿದ್ದೇನೆ, ಡಾ.ರಾಜ್‌ಕುಮಾರ್ ಅವರಿಂದಲೇ ಸ್ಪೂರ್ತಿ ಪಡೆದು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ, ಹಾಗಾಗಿ ಪ್ರತಿ ಹೊಸ ಪ್ರಾಜೆಕ್ಟ್ ಶುರು ಮಾಡುವ ಮುನ್ನ ಅವರ ಸಮಾಧಿಗೆ ಭೇಟಿ ಕೊಟ್ಟು ನಮಸ್ಕರಿಸಿ ಬರುತ್ತೇನೆ.  ಸದ್ಯ ಕಾಲೇಜುಗಳಲ್ಲಿ ಕಿರುಚಿತ್ರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡು ಅಲ್ಪಸಲ್ಪ ದುಡಿಮೆ ಮಾಡುತ್ತಿರುವೆ, ಮುಂದೆ ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡುವ ಆಸೆ. ಅದಕ್ಕೆ ಸ್ಯಾಂಡಲ್‌ವುಡ್‌ನ ನೆರವು ಅಗತ್ಯ.

Leave a Comment