ಸಾಧನೆಗೆ ಗುರುವಿನ ಕೃಪೆ ಅವಶ್ಯ

ಧಾರವಾಡ,ಆ2-ಗುರುವಂದನಾ ಕಾರ್ಯಕ್ರಮದಲ್ಲಿ ದತ್ತ ಉಪಾಸಕರಾದ ಶ್ರೀ ಉಮಾಕಾಂತ ಗುರುಜೀ ಅವರು ಜೀವನದಲ್ಲಿ ಮನುಷ್ಯನಿಗೆ ಯಾವುದೇ ಒಂದು ಕೆಲಸ ಸಾಧಿಸಬೇಕಾದರೆ ಗುರುವಿನ ಅಂತಃಕರಣ ಮತ್ತು ಗುರುವಿನ ಕೃಪೆ (ಅನುಗೃಹ) ಇದ್ದರೆ ಮಾತ್ರ ಸಾಧ್ಯ ಎಂದು ಆರ್ಶಿವದಿಸುತ್ತಾ ಕುಂಬಾರ ಓಣಿಯ ದತ್ತಧಾಮ ಕಾಮನಕಟ್ಟಿಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ರವಿವಾರ ನಡೆದಂತಹ ಸಮಾರಂಭದಲ್ಲಿ ಶ್ರೀ ಉಮಾಕಾಂತ ಗುರುಜೀಯವರು ಯಾವೂದೇ ಭಕ್ತರಿಗೆ ತಂದೆ ತಾಯಿ ಗುರು ನಂತರ ಬರುವವನೆ ಗುರು ವಯಸ್ಸಿಗೆ ಬಂದ ನಂತರ ಗುರುವಿನ ಮಾರ್ಗದಲ್ಲಿ ಅವರು ನಡೆದದ್ದೆ ಯಾದಲ್ಲಿ ಗುರು ಕೃಪೆಯಿಂದ ಎಲ್ಲವನ್ನು ಗೆಲ್ಲುವನು ಮತ್ತು ಯಾವೂದೇ ಕಠಿಣ ಪ್ರಸಂಗದಲ್ಲಿ ನೆನಸಿದರೆ ಗುರುವೇ ಕಾಯುವ ಹರ ಮುನಿದರೆ ಗುರು ಕಾಯುವ ಗುರುವಿನ ಕೃಪೆ ಬಹಳ ದೊಡ್ಡದು ಕಲಿಯುಗದಲ್ಲಿ ಗುರುವಿನಿಂದ ವಿದ್ಯೆಯನ್ನು ಪಡೆದುಕೊಳ್ಳುತ್ತಾರೆ ಆದರೆ ಕ್ರೀಯಾಶೀಲ ನಡೆದುಕೊಳ್ಳುವದಿಲ್ಲ ತೊಂದರೆ ಯಾದಲ್ಲಿ ಮತ್ತೆ ಗುರುವಿನಲ್ಲಿ ಬಂದು ಆಶೀರ್ವದಿಸಿಕೊಳ್ಳುವರು ಯಾವೂದೇ ಕಠಿಣ ಕೆಲಸ (ಪ್ರಸಂಗ) ಗುರುವಿನ ಅಂತಃಕರಣದಿಂದ ಹಗುರವಾಗುವವು ಈ ಗುರುವಂದನಾ ಕಾರ್ಯಕ್ರಮ ಮಹರ್ಷಿ ವ್ಯಾಸಮುನಿಯಿಂದ ಬಂದಂತ ಗುರು ಪರಂಪರೆ ಆದ್ದರಿಂದ ಇಂದಿಗು ನಮ್ಮ ಸನಾತನ ಧರ್ಮದಲ್ಲಿ ಇಂತಹ ಗುರು ಪರಂಪರೆ ಆಚರಿಸುವದು ನಮ್ಮ ಗುರುಗಳಿಗೆ ಸಂತೋಷದ ದಿನ ಎಂದು ಆಶೀರ್ವದಿಸಿದರು.
ಶಂಕರ ಕುಲಕರ್ಣಿ ಪ್ರಾಸ್ಥಾವಿಕ ಮಾತನಾಡಿ ಉಮಾಕಾಂತ ಗುರುಜೀಯವರ ಸಾಧನೆ ಬಹಳದೊಡ್ಡದು ಅವರು ವಾರಕ್ಕೆ ಒಂದು ಉಟಮಾಡುವದು (ರವಿವಾರಕೊಮ್ಮೆ) ವಾರಕೊಮ್ಮೆ ನೀರು ಕುಡಿಯುವದು ಅವರು ಮಾಡಿದ ಸಾಧನೆ ಅಮೂಲ್ಯವಾದದ್ದು ನಾವು ಸಮಾಜದಲ್ಲಿ ಅಂತಹ ಗುರುಗಳನ್ನು ಗುರುತಿಸಿ ಅಂತಹ ಗುರುಗಳಿಗೆ ಗುರುವಂದನೆ ಕಾರ್ಯಕ್ರಮಮಾಡುವದು ಸಮಾಜದ ಕರ್ತವ್ಯವಾಗಿದೆ ಈ ಗುರುವಂದನ ಕಾರ್ಯಕ್ರಮದಲ್ಲಿ ಸಮಾಜದ ಜನರು ಬಂದು ಗುರುವಂದನ ಕಾರ್ಯಕ್ರಮಮಾಡಿದ್ದು ನನಗೆ ಸಂತೋಷವಾಯಿತು ಗುರುವಿನ ಗುಲಾಮವಾಗುವ ತನಕ ದೊರೆಯದು ಎನಗೆ ಮುಕ್ತಿ ಧಾರವಾಡದಲ್ಲಿ ಇಂತಹ ಅಪರೂಪ ಗುರುಗಳು ಇರುವದು ನಮ್ಮೆಲ್ಲರ ಭಾಗ್ಯ ಎಂದು ಶಂಕರ ಕುಲಕರ್ಣಿ ಹರ್ಷಪಟ್ಟರು.
ಮುಂಚಿತವಾಗಿ ಪ್ರಾಥನೆ ದಿಗಂಬರ ಭಜನೆ ಮಾಡಿಸಿ ನಂತರ ಗುರುವಂದನೆ ಕಾರ್ಯಕ್ರಮ ಆರತಿ ಪ್ರಸಾದ ಮಾಡಯಿತು ಅನೇಕ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ತಾರಕೇಶ್ವರ ಭಜನಾ ಮಂಡಳಿ, ಸಿ.ಎಮ್.ಕುಲಕರ್ಣಿ, ಶ್ರೀ ಆರ್ ಕಟ್ಟಿ. ಶಾಂತಾ ಕುಲಕರ್ಣಿ, ಲತಾ ಕುಲಕರ್ಣಿ, ಲತಾ ದೇಶಪಾಂಡೆ, ರೇಖಾ ದೇಶಪಾಂಡೆ, ಮುಂತಾದವರು.ಶಂಕರ ಕುಲಕರ್ಣಿ ವಂದನಾರ್ಪಣೆ ಮಾಡಿದರು.

Leave a Comment