ಸಾಧಕರ ಗುಣಗಾನ

ಯಾರಿಗೆ ಯಾರುಂಟು” ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ನಿಗಧಿತ ಸಮಯಕ್ಕಿಂತ ಒಂದೂ ಕಾಲು ಗಂಟೆ ತಡವಾಗಿ ಚಿತ್ರತಂಡ, ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಕೊನೆಗೂ ಆರಂಭಿಸಿತು.

ಐದು ರೂಪಾಯಿ ವೈದ್ಯ ಎಂದೇ ಖ್ಯಾತಿ ಪಡೆದಿರುವ ಶಂಕರೇಗೌಡ,ಪುಸ್ತಕ ಸಂಗ್ರಹಕಾರ ಅಂಕೇಗೌಡ ಹಾಗು ಅನಾಥರಿಗೆ ಆಶ್ರಯದಾತನಾಗಿರುವ ಆಟೋರಾಜ ಅವರನ್ನು ಉಮೇಶ್ ಬಣಕಾರ್. ರಘುನಂದನ್ ಮಾಸ್ಟರ್ ಹಾಗು ಚಿತ್ರತಂಡ ಸನ್ಮಾನ ಮಾಡಿತು. ಸಾಧಕರ ಸಾಧನೆ ಮುಂದೆ ಬಹಳ ಹೊತ್ತು ಕಾದಿದ್ದುದು ವ್ಯರ್ಥ ಅನ್ನಿಸಲಿಲ್ಲ. ಆಟೊರಾಜ, ೧೧ ಸಾವಿರ ಜನರ ರಕ್ಷಣೆನೀಡಿದ್ದೇನೆ. ನನ್ನ ಜನರು ಭಿಕ್ಷೆ ಬೇಡುವುದು ಬೇಡ ಅವರಿಗಾಗಿ ನಾನು  ಭಿಕ್ಷೆ ಬೇಡಲು ನಿರ್ಧರಿಸಿದ್ದೇನೆ ಎಂದರು. ಅಂಕೇಗೌಡ, ೫೦ ವರ್ಷದಿಂದ ೧೦ ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದೇನೆ. ಎಲ್ಲೇ ಇರಿ ಹೇಗೆ ಇರಿ ಓದುವ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು

ರಘುನಾಥ್ ಮಾಸ್ಟರ್, ಇಂತಹ ಅಪರೂಪದ ಕ್ಣಣ ರೋಮಾಂಚನ ವಾಗಲಿದೆ.ದೊಡ್ಡ ದೊಡ್ಡ ನಟರೂ ಮಾನವೀಯತೆಯ ಪ್ರದರ್ಶನ ಮಾಡಬೇಕು ಎಂದರು. ಉಮೇಶ್ ಬಣಕಾರ್ ಮತ್ತಿತರರು ಚಿತ್ರತಂಡಕ್ಕೆ ಶುಭಾಶಯ ಕೋರಿದರು.

ಪಯಣ,ಸಂಚಾರಿ, ಪಾರು ವೈಫ್ ಆಪ್ ದೇವದಾಸ್ ಚಿತ್ರಗಳ ಬಳಿಕ “ಯಾರಿಗೆ ಯಾರುಂಟು”ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರಿವ ನಿರ್ದೇಶಕ ಕಿರಣ್ ಗೋವಿ,ಮೂರುವರೆ ವರ್ಷದ ನಂತರ ಸಿನಿಮಾ ಮಾಡುತ್ತಿದ್ದೇನೆ.ವಯಕ್ತಿಕ ಕಾರಣದಿಂದ ಸಿನೆಮಾ ಮಾಡಲು ಆಗಿರಲಿಲ್ಲ.ಕಷ್ಟದಲ್ಲಿ ಹುಟ್ಟಿದ ಶೀರ್ಷಿಕೆ ಇದು. ರೋಮಾಂಟಿಕ್ ಕಾಮಿಡಿ ಸಿನಿಮಾ, ತಂದೆಯ ಕೊನೆಯ ತಮ್ಮ ಹೆಚ್.ಸಿ ರಘುನಾಥ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ ಎಂದರು. ನಟಿಯರಾದ ಕೃತಿಕಾ ರವೀಂದ್ರ, ಲೇಖಾ ಚಂದ್ರ, ಅದಿತಿ ರಾವ್, ಚಿತ್ರದ ಬಗ್ಗೆ ಹೇಳಿಕೊಂಡರು.

ನಿರ್ಮಾಪಕ ರಘುನಾಥ-, ಸಿನಿಮಾ ಇಂಪ್ರೆಸ್ ಆಯಿತು.ಫ್ಯಾಮಿಲಿ ಎಂಟಟೈನ್ ಮೆಂಟ್ ಸಿಗಲಿದೆ. ಮಾಡ್ತಾ ಚಿತ್ರ ನಿರ್ಮಾಣ  ಮಾಡ್ತಾ ಚಿತ್ರರಂಗ ಏನು ಅಂತ ಗೊತ್ತಾಯಿತು.ಇಡೀ ತಂಡ ಮನೆ ರೀತಿ ಕೆಲಸ ಮಾಡಿದ್ದೇವೆ.ಕಷ್ಟವೂ ಆಯಿತು.ನಮಗೂ ಖುಷಿಯಾಗಿದೆ.ಜನರಿಗೂ ಇಷ್ಟವಾಗಲಿದೆ ಎಂದು ಹೇಳಿಕೊಂಡರು.

ಗೀತ ರಚನೆಕಾರ ಕೆ.ಕಲ್ಯಾಣ್, ಪ್ರಶ್ನಾರ್ಥಕ ಚಿಹ್ನೆ ಹಾಕಬೇಡಿ  ಅಂತ ಹೇಳಿದ್ದೆ. ಮ್ಯೂಸಿಕಲ್ ಹಿಟ್ ಆಗುವ ಜೊತೆಗಡ   ಕಲರ್ ಪುಲ್ ಸಿನಿಮಾ . ಶೈಕ್ಷಣಿಕ, ಮಾನವೀಯತೆ,ಆರೋಗ್ಯದ ದೇವರನ್ನು ಸನ್ಮಾನ ಮಾಡಿದ್ದೀರಿ ಒಳ್ಳೆಯದಾಗಲಿ ಎಂದರು ಸಂಗೀತ ನಿರ್ದೇಶಕ ಬಿಜೆ. ಭರತ್ ಮತ್ತಿತರಿದ್ದರು.

Leave a Comment