ಸಾಣೇಹಳ್ಳಿ ಶ್ರೀ-ಪಂಚಮಸಾಲಿ ಶ್ರೀಗಳ ಪಾದಯಾತ್ರೆ

ಹರಪನಹಳ್ಳಿ.ಸೆ.10; ಕಳೆದ ಒಂದು ತಿಂಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾಣೇಹಳ್ಳಿ ಮಠದಿಂದ ಶಿವಾನುಭವ ಸಮಿತಿವತಿಯಿಂದ ವಚನಕಾರರ ತಾತ್ವಿಕ ಚಿಂತನಾಗೋಷ್ಟಿಯ ಶ್ರಾವಣ ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಅಂಗವಾಗಿ ಪಟ್ಟಣದಲ್ಲಿ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಹರಿಹರ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಅವರು ಪಾದಯಾತ್ರೆ ನಡೆಸಿದರು.ಪಟ್ಟಣದ ಕೊಟ್ಟೂರು ರಸ್ತೆಯ ಪಿಎಲ್‍ಡಿ ಬ್ಯಾಂಕ್ ವೃತ್ತದಿಂದ ಆರಂಭಗೊಂಡ ಪಾದಯಾತ್ರೆಯು ತೆಗ್ಗಿನಮಠ ಸರ್ಕಲ್, ಟಾಕೀಸ್ ರಸ್ತೆ, ಜೆಸಿ ಸರ್ಕಲ್ ನಿಂದ ಹೊಸಪೇಟೆ ರಸ್ತೆ ಮಾರ್ಗವಾಗಿ ವಿವಿಧ ವಾದ್ಯಗಳೊಂದಿಗೆ ಸಾಗಿ ಬಂದು ಸಮಾರಂಭ ನಡೆಯುವ ಎಚ್‍ಪಿಎಸ್ ಕಾಲೇಜ್ ಅವರಣದಲ್ಲಿ ಅಂತ್ಯಗೊಂಡಿತು. ಉಭಯ ಶ್ರೀಗಳ ಪಾದಯಾತ್ರೆ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಸ್ವಚ್ಚಗೊಳಿಸಿ ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು. ದಾರಿ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ನಿಂತು ಶ್ರೀಗಳ ದರ್ಶನ ಪಡೆದುಕೊಂಡರು. ಬಸವಣ್ಣನವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಎಚ್‍ಪಿಎಸ್ ಕಾಲೇಜ್ ಅವರಣದಲ್ಲಿ ಉಭಯ ಶ್ರೀಗಳು ಸಸಿ ನೆಟ್ಟು ನೀರುರೆದರು.

Leave a Comment