ಸಾಗವಾನಿ ಸಾಗಾಟ ವ್ಯಕ್ತಿ ಬಂಧನ

ಮುಂಡಗೋಡ,ಆ16: ತಾಲೂಕಿನ ಕಾತೂರ ವಲಯದ ರಾಮಾಪುರ ಗ್ರಾಮದ ಅರಣ್ಯದಲ್ಲಿ  ಬೆಲೆಬಾಳುವ ಸಾಗವಾನಿ ಮರ ಕಡಿದು ಬೈಕನಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ಮಾಡಿ ತುಂಡುಗಳ ಸಮೇತ ಒಬ್ಬ ಆರೋಪಿಯನ್ನು ಬಂಧಿಸಿದ್ದು ಮತ್ತೊಂಬ ಆರೋಪಿ ಪರಾರಿಯಾಗಿದಾನೆ.
ಕೊಡಂಬಿ ಗ್ರಾಮದ ಶಿವಪುತ್ರಯ್ಯ ಕಮ್ಮನ್ನಮಠ ಬಂಧಿತ ಆರೋಪಿಯಾಗಿದ್ದು, ರಾಮಾಪುರ ಗ್ರಾಮದ ರಿಯಾಜ ಡೊಳ್ಳೇಶ್ವರ ಪರಾರಿಯಾದ ಆರೋಪಿ. ಈ ಆರೋಪಿಗಳು ಹುಡೇಲಕೊಪ್ಪ ಗ್ರಾಮದ ಅರಣ್ಯದಲ್ಲಿ ಬುಧವಾರ ಬೆಳಿಗ್ಗೆ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದು ತುಂಡಗಳನ್ನು ಮಾಡಿ ಬೈಕ್‍ನಲ್ಲಿ ಸಾಗಿಸುತ್ತಿದ್ದ  ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ರಾಮಾಪುರ ಕೋಡಂಬಿ ರಸ್ತೆಯ ಹತ್ತಿರ ದಾಳಿ ಮಾಡಿ ಸುಮಾರ ಐವತ್ತು ಸಾವಿರ ರೂ ಮೌಲ್ಯದ ಸಾಗವಾನಿ ತುಂಡುಗಳನ್ನು ವಶಪಡಿಸಿಕೊಂಡು.  ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆ ಮರಿಸಿಕೊಡಿದ್ದು ಈ ಆರೋಪಿ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು  ಬಲೆ ಬಿಸಿದ್ದಾರೆ.
ಕಾತೂರ ವಲಯ ಅರಣ್ಯಧಿಕಾರಿ ಅಜಯ ನಾಯ್ಕ ನೇತೃತ್ವದಲ್ಲಿ  ಅರಣ್ಯಾಧಿಕಾರಿಗಳಾದ ಶ್ರೀಶೈ¯ ಐನಾಪುರ, ನಂದೀಶ ಶೆಟ್ಟಿ, ಮಂಜುನಾಥ ದೊಡ್ಡಣ್ಣನವರ, ಸೇರಿದಂತೆ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Comment