ಸಾಗರಗಳಲ್ಲಿ ಮೀನಿಗಿಂತ ಪ್ಲಾಸ್ಟಿಕ್ ಹೆಚ್ಚು

ಈಗಿನ ಪ್ಲಾಸ್ಟಿಕ್ ಬಳಕೆ ಪ್ರಮಾಣವನ್ನು ನಿಯಂತ್ರಿಸದಿದ್ದರೆ 2050ರ ಒಳಗೆ ಸಾಗರಗಳಲ್ಲಿ ಮೀನಿಗಿಂತ ಪ್ಲಾಸ್ಟಿಕ್ ಕಸವೇ ಹೆಚ್ಚಾಗಿರುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.

ಅಗಾಧ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ಕಸ ಸಂಸ್ಕರಣೆಯಾಗದೆ ಸಾಗರ ಸಮುದ್ರಗಳ ಸೇರುತ್ತಾ ಹೋದರೆ 2050ರ ವೇಳೆಗೆ ಸಾಗರದಲ್ಲಿ ಮೀನುಗಳಿಗಿಂತ ಪ್ಲಾಸ್ಟಿಕ್ ಕಸವೇ ಹೆಚ್ಚಾಗುತ್ತದೆ ಎಂದು ವರದಿಯನ್ನು ಹೇಳಿದೆ.

ಪ್ಲಾಸ್ಟಿಕ್ ಕಸದ ಅಪಾಯವನ್ನು ಪರಿಗಣಿಸಿಯೇ ಅದರ ನಿಯಂತ್ರಣ ಮತ್ತು ಪುನರ್ ಸಂಸ್ಕರಣೆಗೆ ಹಲವು ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ. ಇಂಥ ಯೋಜನೆಗಳ ಜಾರಿಗೆ ಸಾರ್ವಜನಿಕ ವಲಯದ ಜೊತೆಗೆ ಖಾಸಗಿ ವಲಯ ಕೈಜೋಡಿಸಬೇಕು.

ಪ್ಲಾಸ್ಟಿಕ್ ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನಗಳ ಜೊತೆಗೆ ಜನರಲ್ಲಿಯೂ ಇದರ ಅಪಾಯದ ಅರಿವು ಮೂಡಬೇಕು. ಬದಲಾದ ಜೀವನಶೈಲಿ, ಬದಲಾದ ಆಹಾರ ಸೇವನೆಯಿಂದ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ.

ಪ್ಲಾಸ್ಟಿಕ್ ಸಂಸ್ಕರಣೆ ಪುನರ್ ಬಳಕೆಯಿಂದ ಕಸದ ಅಪಾಯವನ್ನು ತಪ್ಪಿಸುವುದರ ಜೊತೆಗೆ ಅದು ಆರ್ಥಿಕವಾಗಿಯೂ ಲಾಭದಾಯಕ.

ಪ್ಲಾಸ್ಟಿಕ್ ಕಸ ಅಗಾದ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವುದು ಮತ್ತು ಅದರ ಸಂಸ್ಕರಣೆ ಕುರಿತ ಇತ್ತೀಚೆಗೆ ಎಲ್ಲೇನ್ ಮೆರಾರ್ತ್ ಪ್ರತಿಷ್ಠಾಪನೆ ಮತ್ತು ವಿಶ್ವ ಆರ್ಥಿಕ ವೇದಿಕೆ ಇತ್ತೀಚೆಗೆ ನೀಡಿರುವ ವರದಿಯಲ್ಲಿ, ಇದರ ನಿಯಂತ್ರಣ ಕೈಗೊಳ್ಳದಿದ್ದರೆ 2050ರ ವೇಳೆಗೆ ಸಾಗರಗಳಲ್ಲಿ ಮೀನಿಗಿಂತ ಪ್ಲಾಸ್ಟಿಕ್ ಕಸವೇ ಹೆಚ್ಚಾಗಿ ತುಂಬಿರುತ್ತದೆ ಎಂದಿದೆ.

ಇದರ ಅಪಾಯದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕಸದ ಪುನರ್ ಬಳಕೆ, ಪುನರ್ ಸಂಸ್ಕರಣೆ ಮಾಡದಿದ್ದರೆ ಮುಂದೊಂದು ದಿನ ಇದಕ್ಕೆ ಭಾರಿ ತೆರಬೇಕಾಗುತ್ತಿದೆ ಎಂಬುದಕ್ಕೆ, ಭಾರತ ಸೇರಿದಂತೆ ಬಹುಪಾಲು ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ.

ಬದಲಾದ ಜೀವನ ಶೈಲಿ, ಆಹಾರ ಸೇವನೆ ವಿಧಾನ ಇತ್ಯಾದಿಗಳಿಂದ ಪ್ಲಾಸ್ಟಿಕ್ ಪದಾರ್ಥಗಳ ಬಳಕೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ದೈನಂದಿನ ಚಟುವಟಿಕೆಗಳಲ್ಲಿ ಈಗಿನ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ಹಲವರು ಹೊಸ ಕಾನೂನುಗಳು ಜಾರಿಗೆ ಬಂದಿವೆಯಾದರೂ ಬಳಕೆಯ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ.

ಒಂದು ಅಂದಾಜಿನಂತೆ ಭಾರತದಲ್ಲಿಯೇ ಒಂದು ದಿನದಲ್ಲಿ 15,000 ಟನ್ ಪ್ಲಾಸ್ಟಿಕ್ ಕಸ ಉತ್ಪತ್ತಿಯಾಗುತ್ತದೆ ಎಂದು ಅರಣ್ಯ, ಪರಿಸರ ಬದಲಾವಣೆ ಕೇಂದ್ರ ಸಚಿವ ಅನಿಲ್ ದಾವೆ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಹೇಳಿದ್ದರು. ಅವರು ಅಂದು ನೀಡಿದ್ದ ಅಂಕಿ-ಅಂಶಗಳಂತೆ ಪ್ರತಿನಿತ್ಯ ದೇಶದಲ್ಲಿ 15,342 ಟನ್ ಪ್ಲಾಸ್ಟಿಕ್ ಕಸ ಬೀಳುತ್ತದೆ. ಇದರಲ್ಲಿ ಪುನರ್ ಸಂಸ್ಕರಣೆಗೊಳ್ಳುವ ಪ್ರಮಾಣ 9.205 ಟನ್.

ಇನ್ನು ಉಳಿದ 6,137 ಟನ್ ಪ್ಲಾಸ್ಟಿಕ್ ಕಸ ಸಂಗ್ರಹವಾಗದೆ ಹಾಗೆಯೇ ಉಳಿಯುತ್ತದೆ. ಬೀದಿಗಳಲ್ಲಿ, ಚರಂಡಿಗಳಲ್ಲಿ, ಜಲಾಶಯಗಳಲ್ಲಿ ತುಂಬಿರುತ್ತದೆ.

ಪ್ಲಾಸ್ಟಿಕ್ ನಿಷೇಧ ಕುರಿತಂತೆ ಸರ್ಕಾರದ ಕಾನೂನು ನಿಯಮಾವಳಿಗಳ ಸೂಕ್ತವಾಗಿ ಜಾರಿಗೆಬಂದಿರಲು ಪ್ರಮುಖ ಕಾರಣಗಳು, ಪ್ಲಾಸ್ಟಿಕ್ ಕಸದ ಅಪಾಯದ ಬಗ್ಗೆ ಜನಕ್ಕೆ ಸೂಕ್ತ ಅರಿವು ಇಲ್ಲದಿರುವುದು ಮತ್ತು ಪ್ಲಾಸ್ಟಿಕ್ ಕಸ ಸಂಗ್ರಹಕ್ಕೆ ಸೂಕ್ತ ತಾಂತ್ರಿಕ ಜ್ಞಾನ ಅಳವಡಿಕೆ ಮಾಡದಿರುವುದು.

ಪುನರ್ ಸಂಸ್ಕರಣಾ

ಪ್ಲಾಸ್ಟಿಕ್ ಕಸವನ್ನು ಪುನರ್ ಸಂಸ್ಕರಣಾ ಹಲವು ಕಾರ್ಯ ಯೋಜನೆಗಳು ಇವೆ. ಪುನರ್ ಬಳಕೆ, ಪುನರ್ ಸಂಸ್ಕರಣಾ ಇವುಗಳಲ್ಲಿ ಸೇರಿವೆ. ಪುನರ್ ಸಂಸ್ಕರಿಸಿದ ಪ್ಲಾಸ್ಟಿಕ್ ಕಸವನ್ನು ರಸ್ತೆ ನಿರ್ಮಾಣ, ಇಂಧನ, ತೈಲ ಉತ್ಪಾದನೆಗೆ ಬಳಸಬಹುದು.

ಇಂತಹ ಕಾರ್ಯ ಯೋಜನೆ ಜಾರಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಆದರೆ ಹೆಚ್ಚು ಫಲಕಾರಿ ಎಂದು ಎಲ್ಲೇನ್ ಮೆಕಾರ್ತ್ ಫೌಂಡೇಷನ್‌ನ ಸಂಸ್ಥಾಪಕ ಡ್ಯಾಮ್ ಎಲ್ಲೇನ್ ಮೆಕಾರ್ತ್ ಹೇಳಿದ್ದಾರೆ.

ಪ್ಲಾಸ್ಟಿಕ್ ಪುನರ್ ಬಳಕೆ ಪುನರ್ ಸಂಸ್ಕರಣಾದಿಂದ ಎರಡು ಬಗೆಯ ಲಾಭ. ಒಂದು ಈ ಕಸದ ಅಪಾಯವನ್ನು ತಡೆಯವುದು, ಇನ್ನೊಂದು ಪುನರ್ ಸಂಸ್ಕರಣೆಯನ್ನು ಆರ್ಥಿಕಲಾಭವನ್ನಾಗಿಸುವುದು. ಈ ವಿಷಯದಲ್ಲಿ ಸರ್ಕಾರದ ಜೊತೆಗೆ ಖಾಸಗಿ ಸಂಸ್ಥೆಗಳ ಪಾಲುದಾರಿಕೆಯೂ ಅತಿಮುಖ್ಯ.

ಸಾಗರ ರಕ್ಷಣೆ

ಶೇ. 70ರಷ್ಟು ಭೂಭಾಗ ಸಾಗರ, ಸಮುದ್ರಗಳಿಂದ ಆವೃತವಾಗಿದೆ. ಇವುಗಳನ್ನು ಕಲುಷಿತಗೊಳ್ಳದಂತೆ ತಡೆಯಲು ಅತ್ಯಗತ್ಯ. ಸಪ್ತಸಾಗರಗಳು ಅವಕ್ಕೆ ಹೊಂದಕೊಂಡ ಸಮುದ್ರಗಳು ಭೂಮಿಯ ಶೇ. 70ರಷ್ಟು ಇರುವುದರಿಂದ ಭೂಗ್ರಹವನ್ನು ನೀಲಿಗ್ರಹವೆಂದು ಕರೆಯುತ್ತೇವೆ.

ಸಮುದ್ರ ಸಾಗರಗಳು ನಿರಂತರವಾಗಿ ಕಲುಷಿತಗೊಳ್ಳುತ್ತಿವೆ. ಪೆಟ್ರೋಲಿಯಂ ಬಾವಿಗಳು, ಕಚ್ಚಾ ತೈಲ ಸಾಗಣೆ ಪೈಪುಗಳು, ತೈಲ ಸಾಗಿಸುವ ಹಡುಗುಗಳು, ಇವು ಧಕ್ಕೆಯಾದಾಗ ಮುಳುಗಿದಾಗ ಅದರಿಂದ ಹೊರ ಬರುವ ತೈಲ ಅಪಾರ ಪ್ರಮಾಣದಲ್ಲಿ ಹರಡಿಕೊಂಡು ಸಮುದ್ರ ಜೀವಿಗಳ ಸಾವಿಗೆ ಕಾರಣವಾಗುತ್ತದೆ. ಇದರ ಜೊತೆಗೆ ಪ್ಲಾಸ್ಟಿಕ್ ಕಸವೂ ಸಾಗರ ಸಮುದ್ರ ಸೇರ್ಪಡೆಯಾದರೆ ಜಲಚರ ಜೀವರಾಶಿಗೆ ಭಾರಿ ಗಂಡಾಂತರ ಎಂಬುದೂ ಅತಿಮುಖ್ಯ.

 

Leave a Comment