ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ

ನಂಜನಗೂಡು. ಆ.14- ನಗರಸಭೆ ವತಿಯಿಂದ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಸಾರ್ವಜನಿಕರಿಗೆ ಹೋಟೆಲ್ ಗಳಿಗೆ ಸೂಚನೆ ನೀಡಿದ್ದಾರೆ
ಕಳೆದೊಂದು ವಾರದಿಂದ ಧಾರಕಾರ ಮಳೆ ನೆರೆಯಿಂದ ತತ್ತರಿಸಿದ ಬಡಾವಣೆಗಳಲ್ಲಿ ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡಿದ್ದು ಚರಂಡಿಗಳಲ್ಲಿ ಗಿಡಮರಗಳು ಬಟ್ಟೆಗಳು ತುಂಬಿಕೊಂಡಿದೆ ನಿಂತಿರುವ ನೀರಿನ ಮೇಲೆ ಸೊಳ್ಳೆಗಳು ಮಿತಿಮೀರಿದೆ ಆದ್ದರಿಂದ ರೋಗಗಳು ಬರುವ ಲಕ್ಷಣಗಳು ಉಂಟಾಗಿವೆ ಆದ್ದರಿಂದ ನಗರಸಭೆ ವತಿಯಿಂದ ಸ್ಥಳಗಳಲ್ಲಿ ಸ್ವಚ್ಛತೆ ಕ್ರಮಕೈಗೊಂಡಿದ್ದಾರೆ ಬಿಲ್ದಿಂಗ್ ಪೌಡರ್ ಸಿಂಪಡಿಸುತ್ತಿದ್ದಾರೆ ಚರಂಡಿಗಳಲ್ಲಿ ತುಂಬಿರುವ ಕಸದರಾಶಿಯನ್ನು ಸ್ವಚ್ಛತೆ ಮಾಡುತ್ತಿದ್ದಾರೆ ಇದಲ್ಲದೆ ಎಲ್ಲಾ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಬಿಸಿ ನೀರು ನೀಡುವ ಬಗ್ಗೆ ಸೂಚನೆ ನೀಡಿದ್ದಾರೆ ಮತ್ತು ಮನೆಯ ಸುತ್ತ ನಿಂತಿರುವ ನೀರನ್ನು ಮೋಟಾರ್ ಮೂಲಕ ಹೊರಗೆ ಹಾಕುತ್ತಿದ್ದಾರೆ ಸಾರ್ವಜನಿಕರು ಪ್ರತಿದಿನ ನೀರನ್ನು ಕುದಿಸಿ ಕುಡಿಯಬೇಕೆಂದು ಬಡಾವಣೆಗಳಲ್ಲಿ ಸೂಚಿಸುತ್ತಿದ್ದಾರೆ ಒಟ್ಟಿನಲ್ಲಿ ನಗರದ ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತ ಕರಿಬಸವಯ್ಯ ತಿಳಿಸಿದರು.

Leave a Comment