ಸಹಕಾರ ಸಂಘಗಳ ಸಮಸ್ಯೆಗಳ ಕುರಿತು ಚರ್ಚೆ

ಹುಬ್ಬಳ್ಳಿ, ಜ.22 – ಪೌರತ್ವ ಜಾಗೃತಿ ಕುರಿತಾಗಿ ನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಹಾರಾಜಾ ಅಗ್ರಸೇನ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರು ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಅಸೋಸಿಯೆಷೇನ್ ಬೆಂಗಳೂರು ಇದರ ನಿರ್ದೇಶಕರಾದ ಅಮಿತ್ ವಿಜಯಕುಮಾರ್ ಮಹಾಜನ್ ರವರು ಭೇಟಿ ನೀಡಿ ಸಹಕಾರ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು.
ಸಹಕಾರಿ ಸಂಘಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ವಿನಾಯಿತಿ ನೀಡಬೇಕು, ಸಹಕಾರ ಸಂಘಗಳಿಗೆ ಸದಸ್ಯರ ಠೇವಣಿಗಳ ಮೇಲೆ ಟಿ.ಡಿ.ಎಸ್ ವಿನಾಯಿತಿ, ಜಿ.ಎಸ್.ಟಿ ತೆರಿಗೆ
ವಿನಾಯಿತಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಸಿದರು.
ನಂತರ ಮಾತನಾಡಿದ ಅವರು ಸಹಕಾರ ಕ್ಷೇತ್ರದಲ್ಲಿ ಬರುವ ಇತರ ಎಲ್ಲ ಬಗೆಯ ಸಂಘ ಸಂಸ್ಥೆಗಳ ಕುರಿತು ಸಹಕಾರ ಕ್ಷೇತ್ರ ಅಭಿವೃದ್ಧಿ ಸಂಬಂಧಿಸಿದಂತೆ ವಿಷಯಗಳನ್ನು ತಿಳಿಸಲಾಯಿತು.
ಈ ಸಂದಂರ್ಭದಲ್ಲಿ ಕೇಂದ್ರ ಸಚಿವ ಜೋಶಿ ಉಪಸ್ಥಿತರಿದ್ದರು.

Leave a Comment