ಸಸ್ಪೆನ್ಸ್ ಥ್ರಿಲ್ಲರ್ ’ಕರ್ಷಣಂ’

ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ಧನಂಜಯ ಅತ್ರೆ ಮೊಟ್ಟಮೊದಲ ಬಾರಿಗೆ ನಾಯಕನಾಗಿ ನಿರ್ಮಾಪಕರೂ ಆಗಿರುವ ’ಕರ್ಷಣಂ’ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದ್ದು ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿದೆ.

karshnam_158

ಗೌರಿ ಅತ್ರೆ ಕಥೆ ಬರೆದಿದ್ದು ಶರವಣ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.ಚಿತ್ರ ಪೂರ್ಣಗೊಂಡಿರುವ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವಿತ್ತು. ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಹರಸಿದರು.

’ಕರ್ಷಣಂ’ ಎಂದರೆ ಸೆಳೆತ ಮತ್ತು ಸೆಳೆತವಿಲ್ಲದ ನಡುವಿನ ತಟಸ್ಥ ವಿಷಯವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಸ್ಲಂ ಹುಡುಗನ ಸುತ್ತಾ ಕಥೆ ಸಾಗಲಿದೆ. ಆದರೆ ಆತ ಸ್ಲಂನ ಹುಡುಗ ಅಲ್ಲ. ಮತ್ತೇನು ಎನ್ನುವುದು ಚಿತ್ರದ ತಿರುಳು ಎಂದರು ನಟ ಧನಂಜಯ ಅತ್ರೆ. ಕಳೆದ ೧೧ ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದೇನೆ.ಒಳ್ಳೆಯ ಚಿತ್ರ ನೀಡುವ ಉದ್ದೇಶ ನಮ್ಮದು ಚಿತ್ರಕ್ಕೆ ಮತ್ತು ತಂಡಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

karshnam_135ನಿರ್ದೇಶಕ ಶರವಣ, ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಗರಡಿಯಲ್ಲಿ ಪಳಗಿದ್ದೇನೆ. ನಿರ್ದೇಶಕನಾಗಲು ಅವರೇ ಕಾರಣ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಗುರಿಸಾಧನೆಗೆ ಅಡ್ಡ ದಾರಿ ಹಿಡಿಯಬೇಡಿ. ಇನ್ನೊಬ್ಬರನ್ನು ತುಳಿಯಬಾರದು. ಅದರಿಂದ ನಾವು ಪಡೆದುಕೊಳ್ಳುವುದಕ್ಕಿಂತ ಅವರು ಕಳೆದುಕೊಳ್ಳುವುದು ಹೆಚ್ಚು ಇದನ್ನು ಸಂದೇಶಾತ್ಮಕವಾಗಿ ಹೇಳಿದ್ದೇವೆ. ಮುಂದಿನ ತಿಂಗಳು ತೆರೆಗೆ ಬರಲಿದೆ ಎಂದರು.

ಹಿರಿಯ ನಟ ಶ್ರೀನಿವಾಸ ಮೂರ್ತಿ, ಚಿತ್ರದಲ್ಲಿ ನನಗೂ ಒಂದು ಮಹತ್ವದ ಪಾತ್ರ ನೀಡಿದ್ದಾರೆ ನಿರ್ದೇಶಕರು. ಒಳ್ಳೆಯದಾಗಲಿ ಎಂದು ಹರಸಿದರು.
ಕರ್ಷಣಂ ಚಿತ್ರದ ಮೂಲಕ ಗಾಯಕ ಹೇಮಂತ್, ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳು ಎಲ್ಲಾವೂ ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿವೆ ಸಹಕಾರ ಮತ್ತು ಬೆಂಬಲವಿರಲಿ ಎಂದು ಕೇಳಿಕೊಂಡರು.ನಟಿ ಅನುಷಾ ರೈ, ಪತ್ರಕರ್ತೆಯ ಪಾತ್ರ ಮಾಡುತ್ತಿದ್ದೇನೆ.ಒಳ್ಳೆಯ ಪಾತ್ರ ಸಿಕ್ಕಿದೆ ಎಂದರು.

Leave a Comment