ಸಸಿ ಬಿಡಲು ಹೋಗಿ ಯುವಕರಿಬ್ಬರು ನೀರು ಪಾಲು

 

ಕಲಬುರಗಿ,ಅ.9-ಸಸಿ ಬಿಡಲು ಹೋಗಿ ಯುವಕರಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಫರತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ಳೂರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

ಕೊಳ್ಳೂರ ಗ್ರಾಮದ ಗಣೇಶ ನಿಂಗಯ್ಯ ಗುತ್ತೇದಾರ (18) ಮತ್ತು ಗೋಪಾಲ ಸುರೇಶ ಪಾಟೀಲ (19) ಮೃತಪಟ್ಟ ಯುವರು.

ದಸರಾ ಹಬ್ಬದ ನಿಮಿತ್ಯ ಘಟಸ್ಥಾಪನೆ ಮಾಡಿದ ಮೇಲೆ ಎತ್ತರ ಬೆಳೆದ ನಿಂತಿರುವ ಸಸಿಯನ್ನು ಹಬ್ಬ ಮುಗಿದ ಮೇಲೆ ನೀರಿರುವ ಪ್ರದೇಶದಲ್ಲಿ ವಿಸರ್ಜನೆ ಮಾಡುವ ಪದ್ಧತಿ ನಡೆದುಕೊಂಡು ಬಂದಿದ್ದು, ಅದರಂತೆ ಈ ಯುವಕರು ಇಂದು ಮುಂಜಾನೆ ಕೆರೆಯಲ್ಲಿ ಸಸಿ ಬಿಡಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಗ್ರಾಮಸ್ಥರು ಮತ್ತು ಫರತಾಬಾದ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಮೃತ ಯುವಕರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಫರತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment