ಸವಲತ್ತು ವಿತರಣೆ ವಿಫಲಗೊಂಡ ಅಧಿಕಾರಿಗಳ ವಿರುದ್ಧ ಕ್ರಮ

ಚಾಮರಾಜನಗರ, ಅ. 16- ಗಿರಿಜನರಿಗೆ ಹಾಗೂ ರೈತರಿಗೆ ಸಮರ್ಪಕವಾಗಿ ಸವಲತ್ತು ವಿತರಣೆ ಮಾಡಲು ವಿಫಲವಾಗಿರುವ ಆಯಾ ಇಲಾಖೆಗಳ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗಿರಿಜನರಿಗೆ ಹೊದಿಗೆ ಹಾಗು ಇನ್ನೀತರ ಸವಲತ್ತಗಳನ್ನು ಆ ಇಲಾಖೆಯ ಅಧಿಕಾರಿ ರಾಮಸ್ವಾಮಿ ಸರಿಯಾಗಿ ವಿತರಣೆ ಮಾಡಿಲ್ಲ ಎಂಬ ದೂರುಗಳಿವೆ. ಜನಪ್ರತಿನಿಧಿಗಳನ್ನು ಸಹ ಆಹ್ವಾನಿಸಿ ಸವಲತ್ತು ವಿತರಣೆಯಾಗಿಲ್ಲ. ಈ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಅಸಮರ್ಪಕ ಉತ್ತರ ನೀಡಿದ ಅಧಿಕಾರಿ ವಿರುದ್ದ ಸಿಡಿಮಿಡಿಗೊಂಡ ಅವರು ತೀವ್ರ ತರಾಟೆಗೆ ತೆಗೆದುಕೊಂಡರು.
ಅಲ್ಲದೇ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ನೀಡಿರುವ ಸಲವತ್ತುಗಳು ಸಹ ಸಮರ್ಪಕವಾಗಿ ವಿತರಣೆಯಾಗಿಲ್ಲ. ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಹರವೆ ಹಾಗು ಇತರೇ ಭಾಗದ ರೈತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆ ಮಾಡುವಂತೆ ತಿಳಿಸಿದರು.
ತಾಲೂಕಿನ ಅಭಿವೃದ್ದಿ ಕುರಿತು ಮಹತ್ವದ ಸಭೆ ನಡೆಯುತ್ತಿದ್ದರು ಸಹ ಸಂಬಂಧ ಪಟ್ಟ ಇಲಾಖೆಯ ಅನೇಕ ಅಧಿಕಾರಿಗಳು ಸಭೆಗೆ ಅಗಮಿಸಿಲ್ಲ. ಇಂಥವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು. ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಶೋಕಾಸ್ ನೀಡುವಂತೆ ಶಾಸಕರು ತಿಳಿಸಿದರು. ಅಲ್ಲದೇ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಸಭೆ ಇದ್ದರು ಸಹ ಕಾಮಗಾರಿಗಳ ಪರಿಶೀಲನೆ ಹೋಗಿದ್ದಾರೆ. ಇಲ್ಲಿ ಸಭೆಗೆ ಉತ್ತರ ನೀಡುವವರು ಯಾರು? ಮೊದಲು ಆತನನ್ನು ಸಭೆಗೆ ಕರೆಸಿ ಎಂದು ತಾ.ಪಂ. ಇಓ ಪ್ರೇಂಕುಮಾರ್ ಖಡಕ್ ಸೂಚನೆ ನೀಡಿದರು.
ಕೃಷಿ ಹಾಗು ತೋಟಗಾರಿಕೆ ಇಲಾಖೆಯಿಂದ ತರಬೇತಿಗೆ ಕಳುಹಿಸುವ ವಿಚಾರ ಜನಪ್ರತಿನಿಧಿಗಳ ಗಮನಕ್ಕೆ ಬರುವುದಿಲ್ಲ. ಇಲಾಖೆಯ ಅಧಿಕಾರಿಗಳೇ ತಮಗೆ ಇಷ್ಟ ಬಂದವರನ್ನು ತರಬೇತಿ ಕಳುಹಿಸುತ್ತಿದ್ದಾರೆ ಎಂದು ಜಿ.ಪಂ. ಸದಸ್ಯ ನವೀನ್ ಆರೋಪಿಸಿದರು. ಅಲ್ಲದೇ ತರಬೇತಿಗೆ ತೆರಳುತ್ತಿರುವ ರೈತರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಜನಪ್ರತಿನಿಗಳಿಗೆ ಮಾಹಿತಿ ನೀಡಿ, ಅರ್ಹ ರೈತರು ಸಲವತ್ತು ಹಾಗು ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬೇಕು. ತಮಗೆ ಇಷ್ಟಬಂದಂತೆ ಕಾರ್ಯಕ್ರಮ ರೂಪಿಸಲು ಅಧಿಕಾರ ಕೊಟ್ಟವರು ಯಾರು ಎಂದು ಜಿ.ಪಂ. ಸದಸ್ಯರು ಪ್ರಶ್ನೆ ಮಾಡಿದರು. ಅನೇಕ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಗ್ರಾಮೀಣ ರಸ್ತೆ ಅಭಿವೃದ್ದಿ ಯೋಜನೆಯಡಿಯಲ್ಲಿ ಮೂಡ್ನಾಕೂಡು ರಸ್ತೆ, ಮಲೆಯೂರು ಮಾರ್ಗ ರಸ್ತೆಯನ್ನು ಅಭಿವೃದ್ದಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಳೆದ 2 ವರ್ಷಗಳ ಹಿಂದೆ ಆರಂಭವಾದ ಕಾಮಗಾರಿ ಕೇವಲ ಜೆಲ್ಲಿ ಸುರಿದ ಮಣ್ಣು ಹಾಕಿ ಪೂರ್ತಾ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಇಇ ಶಾಸಕರು ಸೂಚನೆ ನೀಡಿದರು.
ಸಭೆಯಲ್ಲಿ ಜಿ.ಪಂ. ಸದಸ್ಯರಾದ ಬಾಲರಾಜು, ಸದಾಶಿವಮೂರ್ತಿ, ನವೀನ್‍ಕುಮಾರ್, ಶಶಿಕಲಾ, ತಾಪಂ. ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಬಸವಣ್ಣ, ಇಓ ಪ್ರೇಮಕುಮಾರ್, ತಹಶೀಲ್ದಾರ್ ಮಹೇಶ್ ಇದ್ದರು.

Leave a Comment