ಸಲ್ಮಾನ್ ಹೆಸರಿನ ಮೇಕೆ ೮ ಲಕ್ಷ ರೂಗೆ ಮಾರಾಟ

ಉತ್ತರ ಪ್ರದೇಶ, ಆ ೧೨-  ಇಂದು ದೇಶದಾದ್ಯಂತ ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಅನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಉತ್ತರ ಪ್ರದೇಶದ ಗೋರಖಪುರದಲ್ಲಿ  ‘ಸಲ್ಮಾನ್’ ಹೆಸರಿನ ಮೇಕೆಯೊಂದು ಭರ್ಜರಿ ಬೆಲೆಗೆ ಮಾರಾಟವಾಗಿ ಹುಬ್ಬೇರಿಸುವಂತೆ ಮಾಡಿದೆ.

ಹೌದು ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಹೆಸರಿನ ಈ ಮೇಕೆ ಬರೋಬ್ಬರಿ ೮ ಲಕ್ಷ ರೂಗೆ ಮಾರಾಟವಾಗಿ ಇಡೀ ದೇಶದ್ಯಾದಂತ ಸುದ್ದಿ ಮಾಡಿದೆ. ಹೀಗೆ  ಸ್ಟಾರ್ ನಟರ ಹೆಸರನ್ನು ಹೊಂದಿರುವ ಮೇಕೆ ಗಳಿಗೆ ನಟರಂತೆ ಹೈಬಜೆಟ್ ಕೊಟ್ಟು ಖರೀದಿ ಮಾಡಬೇಕು. ಹೀಗಾಗಿ ಹಬ್ಬದ ವಿಶೇಷವಾಗಿ ಸುಮಾರು ೯೫ ರಿಂದ ೧೦೦ ಕೆಜಿ ತೂಗುವ ‘ಸಲ್ಮಾನ್’ ಖಾನ್  ಎಂಬ ಹೆಸರಿನ ಮೇಕೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಬರೋಬ್ಬರಿ ೮ ಲಕ್ಷಕ್ಕೆ ಮಾರಾಟವಾಗಿದೆ.

ಮೇಕೆ ಸಲ್ಮಾಖಾನ್ ಒಡೆಯ ನಿಜಾಮುದ್ದೀನ್, ಹ್ಯಾಂಡ್ ಸಮ್ ಸ್ಟಾರ್ ನಟನಂತೆ ನಮ್ಮ ಮೇಕೆಯೂ ನೋಡಲು ಸುಂದರವಾಗಿದೆ. ದಷ್ಟಪುಷ್ಟವಾಗಿದೆ. ಸಲ್ಮಾನ್ ಹೆಸರಿರುವುದಕ್ಕೆ ಮಾತ್ರ ಮೇಕೆ ಬೆಲೆ ಹೆಚ್ಚಾಗಿಲ್ಲ. ಈ ಮೇಕೆ ಮೇಲಿರುವ ಕಪ್ಪು ಬಣ್ಣದ ಮಚ್ಚೆಗಳು ಕಾರಣವಾಗಿದೆ ಏಕೆಂದರೆ ಈ ಕಪ್ಪು ಚುಕ್ಕೆಗಳನ್ನು ಕೂಡಿಸಿದರೆ, ಅರೇಬಿಕ್ ಭಾಷೆಯಲ್ಲಿ ‘ಅಲ್ಲಾಹ್’ ಎಂಬ ಅರ್ಥ ಬರತ್ತದೆ. ಈಗಾಗಿ ಇಷ್ಟೊಂದು ವಿಶೇಷತೆಯನ್ನೊಂದಿರುವ ನನ್ನ ಮೇಕೆಯನ್ನು ೮ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಈ ಮೇಕೆಯನ್ನು ಸಾಕಲು ದಿನಕ್ಕೆ ೭೦೦ರಿಂದ ೮೦೦ ರೂ. ಖರ್ಚು ಮಾಡಿದ್ದಾರಂತೆ. ಅಲ್ಲದೆ ಮೇಕೆಗೆ ತಿನ್ನಲು ಹುಲ್ಲು. ಎಲೆಗಳನ್ನು ಕೊಡದೆ. ಮನೆಯವರು ಸಾಮಾನ್ಯವಾಗಿ ತಿನ್ನುವ ಚಿಪ್ಸ್, ಟಾಫಿ, ಒಣ ಹಣ್ಣುಗಳನ್ನ ನೀಡಿದ್ದಾರಂತೆ. ಮನೆಯ ಸದಸ್ಯನಂತೆ ಸಾಕಿದ್ದ ಸಲ್ಲುಗೆ ಮಲಗಲು ವಿಶೇಷ ದಿಂಬು ಹಾಸಿಗೆಯ ಸೌಲಭ್ಯವನ್ನು ಒದಗಿಸಿದ್ದರಂತೆ. ಈಗೆ ಬಹಳ ಮುದ್ದಾಗಿ ಸಾಕಿರುವ ಈ ಸಲ್ಲು ಇದೀಗಾ ಬರೋಬ್ಬರಿ ೯೫ ರಿಂದ ೧೦೦ ಕೆಜಿ ತೂಕ ಹೊಂದಿದೆ.

Leave a Comment