ಸಲ್ಮಾನ್ ಎದುರು ಆಮಿ ಜಾಕ್ಸನ್ ದಬಾಂಗ್ -೩ನಲ್ಲಿ ಅವಕಾಶ

ಇತ್ತೀಚಿನ ದಿನಗಳಲ್ಲಿ ಸಲ್ಮಾನ್ ಖಾನ್ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ. ಇದೀಗ ಅಂತಹುದರ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ.

ರಜನಿಕಾಂತ್ ನಟನೆಯ ರೋಬೋಟ್-೨ ಚಿತ್ರದಲ್ಲಿ ನಟಿಸುತ್ತಿರುವ ಆಮಿ ಜಾಕ್ಸನ್, ಇದೀಗ ಸಲ್ಮಾನ್ ಖಾನ್ ಅವರೊಂದಿಗೆ ದಬಾಂಗ್-೩ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಒಂದರ ಹಿಂದೆ ಒಂದರಂತೆ ಸ್ಟಾರ್ ನಟರ ಚಿತ್ರದಲ್ಲಿ ಆಮಿ ನಟಿಸುತ್ತಿದ್ದಾರೆ.

ಅದುವೇ ಭರ್ಜರಿ ಗೆಲುವು ತಂದುಕೊಟ್ಟ ದಬಾಂಗ್ ಚಿತ್ರದ ಸೀಕ್ವೆಲ್. ಅಂದಹಾಗೆ ದಬಾಂಗ್-೩ ಚಿತ್ರಕ್ಕೆ ಸಲ್ಮಾನ್ ಸದ್ದುಗದ್ದಲವಿಲ್ಲದೆ ಕೆಲಸ ಆರಂಭಿಸಿದ್ದು, ಈ ಚಿತ್ರಕ್ಕೆ ಬಾಲಿವುಡ್ ನಟಿ ಆಮಿ ಜಾಕ್ಸನ್ ನಾಯಕಿಯಾಗುವ ಒಲವು ವ್ಯಕ್ತಪಡಿಸಿದ್ದು ಬಹುತೇಕ ಅವಕಾಶ ಸಿಗುವ ಸಾಧ್ಯತೆಗಳಿವೆ.
ಸಲ್ಮಾನ್ ಖಾನ್ ಅವರ ಜೊತೆಗೆ ಕೆಲಸ ಮಾಡಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದೆ. ಅಂತಹ ಸಮಯ ಈಗ ಕೂಡಿ ಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ದಬಾಂಗ್-೩ ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ. ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರದಲ್ಲಿ ನಟಿಸುಲು ಕಾತುರಳಾಗಿದ್ದೇನೆ ಎಂದು ಆಮಿ ಹೇಳಿದ್ದಾರೆ.
ದಬಾಂಗ್-೩ ಚಿತ್ರದಲ್ಲಿ ನಟಿಸುವಂತೆ ಸಲ್ಮಾನ್ ಖಾನ್ ನಟಿಸುವಂತೆ ಕೇಳಿದ್ದು ಖುಷಿಯಿಂದಲೇ ಒಪ್ಪಿಕೊಂಡಿದ್ದೇನೆ. ಒಳ್ಳೆಯ ಚಿತ್ರದಲ್ಲಿ ನಟಿಸಲು ಸದಾ ಕಾತುರಳಾಗಿದ್ದೇನೆ ಎಂದಿದ್ದಾರೆ.
ಸಲ್ಮಾನ್ ಖಾನ್ ಅವರ ಜೊತೆ ನಟಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಬೇಡಿಕೆ ಬರುತ್ತಿತ್ತು.ಅದಕ್ಕೆ ಪೂರಕ ಎನ್ನುವಂತೆ ಇದೀಗ ಅವಕಾಶ ಒದಗಿ ಬಂದಿದೆ. ದಬಾಂಗ್-೩ ಚಿತ್ರದಲ್ಲಿ ನಟಿಸಲು ಅತಿ ಉತ್ಸುಕನಾಗಿದ್ದೇನೆ ಎಂದು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
ಆಮಿ ಸದ್ಯ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಪ್ರದಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ರೋಬೋಟ್-೨ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವೂ ಕೂಡ ಚಿತ್ರ ಜೀವನದಲ್ಲಿ ಒಳ್ಳೆಯ ಹೆಸರು ತರಲಿದೆ. ಜೊತೆಗೆ ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮತ್ತಷ್ಟು ಬ್ಯುಸಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಸ್. ಶಂಕರ್ ಅವರು ೨.೦ ಚಿತ್ರವನ್ನು ನಿರ್ದೇಶನ ಮಾಡಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ.
ಸೂಪರ್ ಸ್ಟಾರ್‌ಗಳ ಜೊತೆ ನಟಿಸಬೇಕು ಎನ್ನುವ ಆಸೆ ಎಲ್ಲಾ ನಟಿಯಿರಗೂ ಇರುತ್ತದೆ. ಆದರೆ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹ ಅವಕಾಶ ನನಗೆ ಸಿಗುತ್ತಿದೆ ಇದು ಖುಷಿಯ ಸಂಗತಿ ಎಂದು ಆಮಿ ಜಾಕ್ಸನ್ ಹೇಳಿದ್ದಾರೆ.

Leave a Comment