ಸಲೂನ್ ಗಳಿಗೆ ಹೊಸ ಲುಕ್- ಸುರಕ್ಷತೆಗೆ ಆದ್ಯತೆ

ಅಳ್ನಾವರ,ಮೇ.23-ಮೇಲ ನೋಟಕ್ಕೆ ಇದು ಯಾವುದಾದರೂ ಸಿಟಿ ಯ ಸಲೂನಿನ ಚಿತ್ರ ಇರಬಹುದು ಎಂದು ನಿಮಗೆ ಗೋಚರಿಸಬಹುದು ಅಲ್ಲವೆ….!
ನಿಜ್ ಆದರೆ …ಇದು ಗ್ರಾಮೀಣ ಭಾಗದ ಅಳ್ನಾವರ ಪಟ್ಟಣದ ಸಲೂನಿನ ಒಳ ಚಿತ್ರಣ……
ಎನಿದು ಹೊಸತು ಅಂತಿರಾ…. ಕೊರೊನಾ ಸೋಂಕು ಬಾರದಿರಲು ಕ್ಷಾರಿಕರು ಕೈಗೊಂಡ ಸುರಕ್ಷತಾ ಕ್ರಮಗಳ ಝಲಕ್ ಇದು….
ಆಸ್ಪತ್ರೆಯಲ್ಲಿ ವೇಷ ತೊಟ್ಟ ಸೇನಾನಿಗಳಂತೆ ಕಂಡು ಬಂದ ಇವರು ಮೈತುಂಬಾ ಸುರಕ್ಷತಾ ಕವಚಗಳನ್ನು ಹಾಕಿಕೊಂಡು ಕ್ಷಾರ ಮಾಡುತ್ತಿದ್ದಾರೆ ಅಲ್ಲವೆ…..
ನಾಲ್ಕನೇ ಹಂತದ ಲಾಕ್ ಡೌನ್ ಆರಂಭದ ನಂತರ ಸಲೂನ ನಡೆಸಲು ಹಲವು ನಿಯಮಗಳನ್ನು ಹೇರಿ ಪರವಾಣಿಗೆ ನೀಡಲಾಗಿದೆ. ಸಧ್ಯ ಇಲ್ಲಿನ ಸಲೂನುಗಳಿಗೆ ಹೊಸ ಜೀವ ಕಳೆ ಬಂದಿದೆ. ಜನರ ಕ್ಷಾರ ಮಾಡಿ ಹೊಸ ಲೂಕ್ ನೀಡುತ್ತಿದ್ದ ಸಲೂನುಗಳಿಗೂ ಹೊಸ ಲೂಕ್ ಬಂದಿದೆ.
ಆಪರೊನಾ ದರಿಸಿದ ಕ್ಷಾರಿಕರು ಕೈಗಳಿಗೆ ಕಡ್ಡಾಯವಾಗಿ ಸೈನಿಟೈಜ್‍ರ ಬಳಸಿದ ನಂತರ ಹ್ಯಾಂಡ್ ಗ್ಲೂಜ್ ಹಾಕಿಕೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮೇಲ ಬದಿಯಲ್ಲಿ ಪೇಸ್ ಶೀಲ್ಡ್ ದರಿಸಿದ್ದಾರೆ. ತಲೆಗೂದಲಿಗೆ ಕೂಡಾ ಸುರಕ್ಷತಾ ಕವಚ ಹಾಕಿಕೊಂಡಿದ್ದಾರೆ. ಸುಚಿಯಾದ ಬಟ್ಟೆ ಹಾಕಿ ಕಟಿಂಗ್ ಮಾಡಲಾಗುತ್ತಿದೆ.
ಜೊತೆಗೆ ಅಂಗಡಿಯಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಲಾಗಿದೆ. ಕ್ಷಾರ ಮಾಡಿದ ವಸ್ತುಗಳನ್ನು ಬಿಸಿ ನೀರಿನಲ್ಲಿ ಇಟ್ಟು ನಂತರ ಬಳಕೆ ಮಾಡುತ್ತಿದ್ದಾರೆ.
ಇಲ್ಲಿನ ಆಜಾಧ ರಸ್ತೆಯಲ್ಲಿನ ಶ್ರೀ ಸಾಯಿ ಹೇರ್ ಡ್ರೇಸಸ್ ಹೊಸ ಲೂಕ್ ನಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ.
ರಾಘವೇಂದ್ರ ಮನ್ನಾಪೂರ, ಸಂತೋಷ ಮನ್ನಾಪೂರ, ವಿನಾಯಕ ಮನ್ನಾಪೂರ, ವೆಂಕಟೇಶ ಭೂಗಾರಂ. ವೇಣುಗೋಪಾಲ ಮನ್ನಾಪೂರ ಮುಂತಾದವರು ಸಾಕಷ್ಟು ಶ್ರಮ ಪಟ್ಟು ಸಲೂನಿನ ಕೆಲಸ ಮಾಡಿ ಬದುಕು ಪುನಹ ಕಟ್ಟಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ಈ ಎಲ್ಲ ಹೊದಿಕೆಗಳು ಬಿಸಿಲಿನ ಹೊಡೆತಕ್ಕೆ ಅವರಿಗೆ ಸಾಕಷ್ಟು ತೊಂದರೆ ನೀಡಿದರೂ ಸಹಿಸಿಕೊಂಡು ಕೊರೊನಾ ಮಹಾಮಾರಿ ಜೊತೆ ಯುದ್ದ ಸಾರಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಬೀತಿಯಲ್ಲಿ ಜನರ ಬದುಕಿನ ಶೈಲಿ ವಿಭಿನ್ನತೆಯತ್ತ ಸಾಗಿದ್ದು ನಿಜ್ ಅಲ್ಲವೆ…
ಕೊರೊನಾ ಸೋಂಕು ಬಾರದಂತೆ ಸ್ಥಳಿಯ ಆಡಳಿತ ನೀಡಿದ ಸಲಹೆಗಳನ್ನು ಎಲ್ಲರೂ ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ.
ಸರ್ಕಾರ ಕೂಡಾ ಕ್ಷಾರಿಕರಿಗೆ ಸಾಕಷ್ಟು ನೆರವು ನೀಡುತ್ತಿದ್ದು. ಇದು ಅವರ ಪಾಲಿಗೆ ಹೊಸ ಚೈತನ್ಯ ತುಂಬಿದೆ.

Leave a Comment