ಸಲಿಂಗ ಕಾಮ ಸುಪ್ರೀಂ ತೀರ್ಪು ಜಾರಿಗೆ ಆಗ್ರಹ

ಬೆಂಗಳೂರು, ಸೆ. ೧೧- ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಿದ್ದ ಭಾರತೀಯ ದಂಡಸಂಹಿತೆ 377ರ ವಿರುದ್ಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಲೈಂಗಿಕತೆ ಸಂಘ ಆಗ್ರಹಿಸಿದೆ.
ಐಪಿಸಿ 377ರ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಈ ತೀರ್ಪು ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸಂವಿಧಾನಾತ್ಮಕ ರಕ್ಷಣೆ ಮತ್ತು ಪೌರ ಹಕ್ಕುಗಳನ್ನು ನೀಡಲಿದೆ ಎಂದು ಸಂಘದ ಮುಖ್ಯಸ್ಥೆ ಡಾ. ಅಕ್ಕಯ್ಯ ಪದ್ಮಶಾಲಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಈ ತೀರ್ಪುನಿಂದ ಸಂವಿಧಾನದಲ್ಲಿ ಎಲ್ಲಾ ಪ್ರಜೆಗಳಿಗೆ ನೀಡಿರುವ ಹಕ್ಕುಗಳು ಮರುಸಾಬೀತಾಗಿದೆ. ಪ್ರತಿ ಮನುಷ್ಯರಿಗೆ ಸ್ವಾತಂತ್ರ ಸ್ವಾಯತ್ತತೆ, ಘನತೆ ಒದಗಿಸಲಿದೆ. ಐಪಿಸಿ 377ರ ವ್ಯವಸ್ಥಿತ ತಾರತಮ್ಯದ ಮುಖವಾಗಿತ್ತು. ಈ ತೀರ್ಪು ತಾರಮ್ಯತೆಗೆ ಹತ್ಯೆ ಹಾಡಿದೆ ಎಂದರು.
ಐಪಿಸಿ ಕಲಂ 377 ಲಿಂಗತ್ವ ಅಲ್ಪಸಂಖ್ಯಾತರನ್ನು ಅಪರಾಧಿ ಕರೆಸಿರುವ ಹಿನ್ನೆಲೆ ಇದರ ವಿರುದ್ಧ ನಿರಂತರ ಹೋರಾಟ ನಡೆಸಲಾಯಿತು. ಹೋರಾಟದ ಫಲವಾಗಿ ಇಂದು ನಮಗೆ ಹಕ್ಕು ದೊರೆಯಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಜೈನ್ ಕೊಟಾರಿ, ಉಮೇಶ್ ಸನಾ, ಎಲಿಂಗ್ ಗೋಗಲ್ ಇತರರು ಉಪಸ್ಥಿತರಿದ್ದರು.

Leave a Comment