ಸರ್ವೆಗೆ ಲಂಚ ಬೇಡಿಕೆ: ಶಿಸ್ತುಕ್ರಮಕ್ಕೆ ಒತ್ತಾಯ

ಲಿಂಗಸಗೂರು.ಜು.17- ಕೃಷಿಕರು ಉಳುಮೆ ಮಾಡುತ್ತಿರುವ ಜಮೀನು ಸರ್ವೆ ಸೇರಿದಂತೆ ಪಹಣಿ ವಿತರಣೆಗೆ ಸಾವಿರಾರು ರೂ. ಲಂಚ ಬೇಡಿಕೆ ಇಡುವ ಸರ್ವೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಹಿಸುವಂತೆ ರೈತ ಸಂಘ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಒತ್ತಾಯಿಸಿದರು.

ಕಲ್ಬುರ್ಗಿ ಪ್ರಾದೇಶಿಕ ಆಯುಕ್ತ ಹರ್ಷಾ ಗುಪ್ತಾರವರಿಗೆ ಮನವಿ ಸಲ್ಲಿಸಿ ಗಂಭೀರ ಆರೋಪಿಸಿದ ಅವರು, ಯಾವುದೇ ರೀತಿಯ ಸರ್ವೆ ಪ್ರಕ್ರಿಯೆಗಾಗಿ ಪಟ್ಟಣದ ಸರ್ವೆ ಅಧಿಕಾರಿಗಳು ಮನಬಂದ ಲಂಚ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ, ಅರ್ಜಿ ಸಲ್ಲಿಕೆ ಮಾಡಿರುವ ರೈತರಿಗೆ ಸಕಾಲಕ್ಕೆ ಪಹಣಿ ವಿತರಿಸದೆ ಕಚೇರಿ ಅಲೆಯುವಂತೆ ಮಾಡಲಾಗುತ್ತಿದೆಂದರು. ಪಡಿತರ ಚೀಟಿ ವಿತರಣೆಯಲ್ಲಿ ಗಣಕಯಂತ್ರ ಸಿಬ್ಬಂದಿ ಅನಾವಶ್ಯ ಕಾಲಹರಣ ಮಾಡಲಾಗುತ್ತಿದೆ. ಹೊನ್ನಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಯಲ್ಲಿ ನಡೆದಿರುವ ಕೋಟ್ಯಾಂತ ರೂ. ಅನುದಾನ ಲೂಟಿ ಪ್ರಕರಣ ಉನ್ನತ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಹಿಸುವಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಹಾಜೀಬಾಬು ಕರಡಕಲ್, ಬಸವರಾಜ, ಹನುಮಂತ, ಶಿವಗ್ಯಾನಪ್ಪ, ಸಹಾಯಕ ಆಯುಕ್ತರಾದ ದಿವ್ಯಪ್ರಭು, ಜಂಟಿ ನಿರ್ದೇಶಕ ವಿರೇಶ ಸೇರಿದಂತೆ ಅನೇಕರು ಹಾಜರಿದ್ದರು.

Leave a Comment