ಸರ್ಕಾರ ಬೀಳಿಸಲು ಯಾರೂ ಷಡ್ಯಂತ್ರ ನಡೆಸುತ್ತಿಲ್ಲ-ಜಮೀರಅಹ್ಮದ

ಹುಬ್ಬಳ್ಳಿ,ಆ 28- ರಾಜ್ಯಸರ್ಕಾರವನ್ನು ಉರುಳಿಸಲು ಯಾರೂ ಷಡ್ಯಂತ್ರ ನಡೆಸುತ್ತಿಲ್ಲವೆಂದು ರಾಜ್ಯಆಹಾರ ಖಾತೆ ಸಚಿವ ಜಮೀರ ಅಹ್ಮದ ಸ್ಪಷ್ಟವಾಗಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುವೆನೆಂದು ನೀಡಿರುವ ಹೇಳಿಕೆ ಕುರಿತಂತೆ ಗೊಂದಲ ಉಂಟಾಗಿದೆಯಷ್ಟೇ ಎಂದು ಹೇಳಿದರು.
ಸಿದ್ಧರಾಮಯ್ಯನವರು ಹೇಳಿದ್ದು ಮುಂದಿನ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುವೆನೆಂದೇ ಹೊರತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಸರ್ಕಾರವನ್ನು ಬೀಳಿಸಿ ಸಿ.ಎಂ.ಆಗುವೆನೆಂದು ಅಲ್ಲ ಎಂದು ಅವರು ನುಡಿದರು.
ಸಿದ್ಧರಾಮಯ್ಯನವರು ಯಾವಾಗಲೂ ನಮ್ಮ ನಾಯಕರು ಈ ಕುರಿತಂತೆ ಎರಡು ಮಾತಿಲ್ಲ ಎಂದು ಜಮೀರ ಅಹ್ಮದ ಹೇಳಿದರು.
ಸಿದ್ಧರಾಮಯ್ಯನರ ಯುರೋಪ ಪ್ರವಾಸ ಪೂರ್ವ ನಿಗದಿಯಾದದ್ದು, ಅವರು ಕರೆದಿದ್ದರೆ ನಾನೂ ಅವರ ಜೊತೆ ಹೋಗುತ್ತಿದ್ದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಹು.ಧಾ.ಮ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫ ಹುಸೇನ ಹಳ್ಳೂರ ಕಾಂಗ್ರೆಸ್ ಧುರೀಣರಾದ ಅಲ್ತಾಫನವಾಜ ಎಂ.ಕಿತ್ತೂರ ಮತ್ತಿತರರು ಉಪಸ್ಥಿತರಿದ್ದರು.

Leave a Comment