ಸರ್ಕಾರಿ ಶಾಲೆ ದತ್ತು ಜಗದೀಶ್ ಹೊಸ ಪ್ರಯತ್ನ

ಚಿಕ್ಕನೆಟಕುಂಟೆ ಜಿ. ರಮೇಶ್

ಕನ್ನಡ ಚಿತ್ರರಂಗದಲ್ಲಿ ಚಿತ್ರಗಳ ಪ್ರಚಾರಕ್ಕಾಗಿ ವಿನೂತನ,ವಿಭಿನ್ನ ಆಲೋಚನೆ,ತಂತ್ರ ಪ್ರತಿತಂತ್ರ ಅನುಸರಿಸುತ್ತಿರುವ ಪ್ರಸ್ತುತ ದಿನಗಳಲ್ಲಿ “ಥರ್ಡ್ ಕ್ಲಾಸ್”. ಚಿತ್ರ ತಂಡ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ನಾಯಕ ಕಮ್ ನಿರ್ಮಾಪಕ ಜಗದೀಶ್ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರುಳ ಕೊಪ್ಪ ಸರ್ಕಾರಿ ಶಾಲೆಯನ್ನು ದತ್ತು ಪಡೆಯುವ ಮೂಲಕ ಚಿತ್ರರಂಗಕ್ಕೆ ಮಾದರಿಯಾಗಿದ್ದಾರೆ.ಜೊತೆಗೆ ಚಿತ್ರರಂಗಕ್ಕೆ ಬರುವ ಮತ್ತಷ್ಟು ಜನರಿಗೆ ಸ್ಪೂತ್ರಿಯಾಗಿದ್ದಾರೆ.

ಶಾಳೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು ಪಾಳು ಬಿದ್ದ ಮನೆಯಂತಾಗಿದ್ದ ಸರ್ಕಾರಿ ಶಾಲಾ ಕಟ್ಟಡಕ್ಕೆ ಹೊಸ ಕಾಯಕಲ್ಪ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡುವ ಜೊತೆಗೆ ಶಾಲೆಯ ಸಮಸ್ಯೆ ಅರಿತಿದ್ದಾರೆ. ಮಾರನೇ ದಿನ ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಸರ್ಕಾರಿ ಶಾಲೆಯ ಪುನರ್ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆವೇರಿಸಿದ್ದು ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣ ಸಜ್ಜುಗೊಂಡ ಶಾಲೆಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಿ ನಮ್ ಜಗದೀಶ್ ಮತಗತುವರ ತಂಡ ಮುಂದಾಗಿದೆ.

govt-school1

ಚಿತ್ರದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ “ಥರ್ಡ್ ಕ್ಲಾಸ್ ” ಚಿತ್ರ ತಂಡ ರಾಜ್ಯದ ವಿವಿಧ ಭಾಗಗಳಲ್ಲಿ ಹೋದ ಕಡೆಯಲ್ಲಿ ಸಾಮಾಜಿಕ ಕೆಲಸ ಕಾರ್ಯಗಳಿಗೆ ಸಾಥ್ ನೀಡುತ್ತಿದೆ. ಜೊತೆಗೆ ಆಟೋ, ಕ್ಯಾಬ್ ಚಾಲಕರಿಗೆ ವಿಮೆ ಮಾಡಿಸುವ ಮೂಲಕ ಅವರ ಜೀವನಕ್ಕೆ ನೆಲ ಕಲ್ಪಿಸುವ ಕೆಲಸ ಮಾಡುತ್ತಿದೆ.

“ಥರ್ಡ್ ಕ್ಲಾಸ್ ” ಚಿತ್ರದ ಹೆಸರು ಕೇಳಿದರೆ ಯಾರಾದರೂ ಈ ರೀತಿ ಹೆಸರು ಇಡುತ್ತಾರೆ ಎನ್ನುವ ಪ್ರಶ್ನೆ ಮೂಡದೇ ಇರಲಾರದು. ಆದರೆ ಜಗದೀಶ್ ಮತ್ತವತ ತಂಡ ರಾಜ್ಯದ ಜನ ಮೆಚ್ಚುವ “ಫಸ್ಟ್ ಕ್ಲಾಸ್” ಕೆಲಸಮಾಡುತ್ತಿದೆ.
ನಟ ಜಗದೀಶ್ ಅವರೊಂದಿಗೆ ನಟಿ ರೂಪಿಕಾ ಮತ್ತು ಚಿತ್ರತಂಡ ಸಾಥ್ ನೀಡಿದ್ದು ಸಮಾಜಮುಖಿ ಕೆಲಸಗಳಲ್ಲಿ ಹೆಗಲಿಗೆ ಹೆಗಲು ನೀಡಿದ್ದಾರೆ
ಥರ್ಡ್ ಕ್ಲಾಸ್ ಅಂತ ಮೂಗು ಮುರಿಯದಿರಿ ಮನಸ್ಸಿದ್ದರೆ ಥರ್ಡ್ ಕ್ಲಾಸ್ ಅನ್ನು ಫಸ್ಟ್ ಕ್ಲಾಸ್ ಮಾಡಬಹುದು ಎನ್ನುವುದನ್ನು ಕಳೆದ ಎರಡು ಮೂರು ತಿಂಗಳಿಂದ ನಿರುಪಿಸಿಕೊಂಡು ಬರುತ್ತಿದ್ದಾರೆ.ಯಾವುದೇ ಕೆಲಸ ಮಾಡಲಿ ಅದನ್ನು ಅಚ್ಚುಕಟ್ಟಾಗಿ ಮಾಡಬೇಕೆನ್ನುವ

ಉದ್ದೇಶ ನಮ್ಮದು.ಹೀಗಾಗಿ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತಿದ್ದೇನೆ.ಗಳಿಸಿದ್ದನ್ನು ಸಮಾಜಕ್ಕೆ ನೀಡಬೇಕೆನ್ನುವ ಛಲ ಮತ್ತು ಕನಸು ಅದನ್ನು ಸಾಕಾರ ಮಾಡುತ್ತಿದ್ದೇನೆ ಎನ್ನುತ್ತಾರೆ ನಟ ನಿರ್ಮಾಪಕ ನಮ್ ಜಗದೀಶ್.

govt-school2
” ಥರ್ಡ್ ಕ್ಲಾಸ್ “ಚಿತ್ರ ಬಿಡುಗಡೆಗೆ ಸಿದ್ದಗೊಂಡಿದ್ದು ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೋದ ಕಡೆಯಲ್ಲಾ ಸಮಾಜ ಮುಖಿಕೆಲಸಗಳ ಮೂಲಕ. ಜನರಿಗೆ ಮತ್ತಷ್ಟು ಹತ್ತಿರವಾಗುವ ಕೆಲಸ ಮಾಡುತ್ತಿದ್ದಾರೆ ಥರ್ಡ್ ಕ್ಲಾಸ್ ಚಿತ್ರದ ರುವಾರಿ ಜಗದೀಶ್.

ಹೊಸ ಪ್ರಯತ್ನ
ಕನ್ನಡ ಚಿತ್ರರಂಗದ ಮಟ್ಟಿಗೆ ಚಿತ್ರದ ಪ್ರಚಾರದ ವೇಳೆ ಪಾಳು ಬಿದ್ದ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅದರ ಕಾಯಕಲ್ಪಕ್ಕೆ ಮುಂದಾಗಿರಿವುದು ಇತ್ತೀಚಿನ ದಿನಗಳಲ್ಲಿ ಹೊಸದು.ಚಿತ್ರರಂಗದ ಮಂದಿ ಈ ರೀತಿಯ ಸಮಾಜಮುಖಿ ಕೆಲಸಮಾಡಿರುವುದು ವಿರಳ.ಅಂತಹ ವಿರಳ.ಅಂತಹ ಹಿರಿಮೆಯ ಗರಿ ನಟ ಜಗದೀಶ್ ಮತ್ತವರ ತಂಡಕ್ಕೆ ಸಲ್ಲಲಿದೆ.

Leave a Comment